ಹಾಸನ: ಸಿಎಂ ಬಿ.ಎಸ್​ ಯಡಿಯೂರಪ್ಪ ಜೊತೆಗಿನ ಇಂದಿನ ಸಭೆಯಲ್ಲಿ, ಜಿಲ್ಲೆಯ ಸ್ಥಿತಿಗತಿ ತಿಳಿಸಿದ್ದೇನೆ. ಸಿಎಂ ಮುಖಕ್ಕೆ ನೇರವಾಗಿ ಹೇಳಿದ್ದೇನೆ ಅಂತ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ವಿಚಾರವಾಗಿ ಇಂದು ಯಡಿಯೂರಪ್ಪ ಹಾಸನ, ಮೈಸೂರು, ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ರು.

ಸಭೆ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರೇವಣ್ಣ, ಸ್ವಾಮಿ ನಿಮ್ಮ ಮನೆಗೆ ಬಂದು ಖುದ್ದಾಗಿ ಹೇಳಿದ್ದೇನೆ. ಜಿಲ್ಲೆಯಲ್ಲಿ 2 ವರ್ಷದಿಂದ ಏನೂ ಕೆಲಸ ಆಗಿಲ್ಲ. ನಮ್ಮ ಜಿಲ್ಲೆಯ ಜನರನ್ನ ಉಳಿಸಿ ಅಂತ ಮನೆಗೆ ಬಂದು ಹೇಳಿದ್ದೀನಿ. ಇದ್ರಲ್ಲಿ ರಾಜಕಾರಣ ಮಾಡಬೇಡಿ ಅಂತ ಸಭೆಯಲ್ಲಿ ನೇರವಾಗಿ ಸಿಎಂ ಮುಖಕ್ಕೆ ಹೇಳಿದ್ದೇನೆ. ಇದಕ್ಕೆ  ಉಸಿರೇ ಇಲ್ಲ ಮುಖ್ಯಮಂತ್ರಿಗಳದ್ದು ಎಂದರು. ಡಾಕ್ಟರ್​​ಗಳನ್ನ ಹಾಕ್ತೀವಿ ರೇವಣ್ಣ ಇನ್ನೆರಡು ದಿನಗಳಲ್ಲಿ ಅಂದ್ರು, ಇನ್ಯಾವುದಕ್ಕೂ ಉಸಿರೇ ಇಲ್ಲ ಎಂದು ರೇವಣ್ಣ ಹರಿಹಾಯ್ದರು.

ದೇವೇಗೌಡರು ಪ್ರಧಾನಿಯಾಗಿ ಇಂಥ ಸಣ್ಣ ರಾಜಕಾರಣ ಮಾಡಲಿಲ್ಲ. ದೇವೇಗೌಡರು ಕೊಟ್ಟ ಸಲಹೆಗಳಲ್ಲಿ 11 ಅಂಶಗಳನ್ನ ಪ್ರಧಾನಿ ಪರಿಗಣಿಸಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಹಾಸನದಲ್ಲಿ 510 ಜನ ಸತ್ತಿರುವುದಕ್ಕೆ ಸರ್ಕಾರವೇ ನೇರ ಕಾರಣ. ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗಬೇಕೆಂದರೆ ಜಿಲ್ಲೆಯ ಜನರನ್ನು ಉಳಿಸಿಕೊಡಿ. ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆಲಸ ಆಗಿಲ್ಲ. ನನ್ನನ್ನು ಜನ ಮತ ಹಾಕಿ ಗೆಲ್ಲಿಸಿದ್ದಾರೆ, ನಾನು ಅವರ ಗುಲಾಮ. ಈ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೇವಣ್ಣ ಸಿಎಂ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.

The post ಹಾಸನದ ಸ್ಥಿತಿಗತಿ ಬಗ್ಗೆ ನೇರವಾಗಿ ಸಿಎಂ ಮುಖಕ್ಕೆ ಹೇಳ್ದೆ, ಉಸಿರೇ ಇಲ್ಲ -ರೇವಣ್ಣ appeared first on News First Kannada.

Source: newsfirstlive.com

Source link