ಹಾಸನ: ಕಾಡಾನೆಗಳ ಹಿಂಡು ಹಾಸನ ನಗರದೊಳಗೆ ಎಂಟ್ರಿ ಕೊಟ್ಟಿದೆ. ಸಕಲೇಶಪುರ ಪಟ್ಟಣದ ಪ್ರಕೃತಿ ಬಡಾವಣೆಯಲ್ಲಿ ಗಜಪಡೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಗುಂಡಿಗೆರೆ ಹಾಗೂ ಕೊಣಬನಹಳ್ಳಿಯಲ್ಲಿ‌ ಆನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಗಜಪಡೆ ದಾಳಿಯಿಂದ ಬಾಳೆ,‌ ಕಾಫಿ, ಏಲಕ್ಕಿ ಬೆಳೆ ನಾಶವಾಗಿದೆ. ಇದರಿಂದ ಶಂಕರ್, ಹೆನ್ರಿ, ಸಿಕ್ವೆರ್, ದಿವಾಕರ್, ಉಮೇಶ್ ಹಾಗೂ ಪವನ್ ಎಂಬುವವರಿಗೆ ಅಪಾರ ನಷ್ಟವಾಗಿದೆ.

ಸದ್ಯ ಕಾಫಿ ತೋಟದಲ್ಲೇ ಆನೆಗಳು ಬೀಡುಬಿಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಡಲಾಗ್ತಿದೆ.

 

The post ಹಾಸನ ನಗರದೊಳಗೆ ಎಂಟ್ರಿ ಕೊಟ್ಟ ಕಾಡಾನೆಗಳ‌ ಹಿಂಡು, ಜನರಲ್ಲಿ ಆತಂಕ appeared first on News First Kannada.

Source: newsfirstlive.com

Source link