ಹಾಸನ: ನಾಪತ್ತೆಯಾದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿದ ಪೊಲೀಸರು – Hassan Police trace missing minor girl hassan news in kannada


ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಹಾಸನದ ಬಾಲಮಂದಿರ ‌ಸುಪರ್ದಿಗೆ ಒಪ್ಪಿಸಿ ರಕ್ಷಣೆ ನೀಡಲಾಗುತ್ತಿದೆ.

ಹಾಸನ: ನಾಪತ್ತೆಯಾದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿದ ಪೊಲೀಸರು

ಹಾಸನದಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿದ ಪೊಲೀಸರು

ಹಾಸನ: ಶಾಲೆಯಿಂದ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ನಂದಿತಾಳನ್ನು ತುಮಕೂರಿನಲ್ಲಿ ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ರಕ್ಷಿಸಿ ಜಿಲ್ಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಶಾಲೆ ಬಳಿಯಿಂದ ದಾಸರಹಳ್ಳಿಯ ನಂದಿತಾ ನವೆಂಬರ್ 7ರಂದು ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ತಿಪಟೂರಿಗೆ ಬಸ್ ಹತ್ತಿದ್ದಾಳೆ. ಬಾಲಕಿಯ ಹುಡುಕಾಟದಲ್ಲಿ ಪೋಷಕರು ಹಾಗೂ ಪೊಲೀಸರು ಅಂದಿನಿಂದ ಹತ್ತುದಿನಗಳ ಕಾಲ ತೊಡಗಿದ್ದರು. ಹಾಗಿದ್ದರೆ ಹತ್ತು ದಿನಗಳ ಕಾಲ ಬಾಲಕಿ ಎಲ್ಲಿ ಹೋಗಿದ್ದಳು? ಯಾರೊಂದಿಗೆ ಇದ್ದಳು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ದಾಸರಹಳ್ಳಿಯ ನಂದಿತಾ ನವೆಂಬರ್ 7ರಂದು ಶಾಲೆ ಮುಗಿಸಿ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಳು. ಇತ್ತ ಗಾಬರಿಗೊಂಡ ಪೋಷಕರು ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ ಓರ್ವ ಮಹಿಳೆ ಜೊತೆ ನಂದಿತಾ ಇರುವ ಬಗ್ಗೆ ತುಮಕೂರು ‌ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ತುಮಕೂರಿಗೆ ಹೋಗಿ ನಂದಿತಾಳನ್ನು ರಕ್ಷಿಸಿದ್ದಾರೆ.

TV9 Kannada


Leave a Reply

Your email address will not be published.