ಹಾಸನ ಪರಿಷತ್​​​​ ಪ್ರಚಾರಕ್ಕೆ ಬಾರದ ರಾಜ್ಯ ‘ಕೈ’ಪಡೆ: ಜೋಡೆತ್ತು ಸೈಲೆಂಟು.. ದಳದಲ್ಲಿ ಹುಮ್ಮಸ್ಸು..!


ಬೆಂಗಳೂರು: ಕಳೆದ ಪರಿಷತ್​ ಚುನಾವಣೆಯಲ್ಲಿ ದಳದ ಭದ್ರಕೋಟೆಯನ್ನೇ ಬೇಧಿಸಿತ್ತು ಕಾಂಗ್ರೆಸ್​. 2016ರ ಸೇಡನ್ನ ತೀರಿಸಿಕೊಳ್ಳಲು ಇದೀಗ ದಳಪತಿಗಳು ಟೊಂಕಕಟ್ಟಿ ನಿಂತಿದ್ದು, ಶತಾಯಗತಾಯ ಕ್ಷೇತ್ರ ಮರಳಿ ಹಿಂಪಡೆಯಲು ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಆದ್ರೆ, ಅದ್ಯಾಕೋ ಕಾಂಗ್ರೆಸ್​ ಮಾತ್ರ ಆ ಕ್ಷೇತ್ರದತ್ತ ಗಮನ ಹರಿಸ್ತಿಲ್ಲ. ಈ ಬಾರೀ ಯಾಕೋ ಕ್ಷೇತ್ರದಲ್ಲಿ ಸೈಲೆಂಟ್​ ಆಗ್ಬಿಟ್ಟಿದೆ.

ಹಾಸನ ಹೇಳಿಕೇಳಿ ಜೆಡಿಎಸ್​ ಭದ್ರಕೋಟೆ..ಆದ್ರೆ, ಕಳೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ ದಳದ ವ್ಯೂಹ ಬೇಧಿಸಿ ಗೆಲುವಿನ ನಗೆ ಬೀರಿತ್ತು. ಈ ಹಿನ್ನೆಲೆ ಹಾಸನ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ದಳಪತಿಗಳು ಕ್ಷೇತ್ರವನ್ನ ಮತ್ತೆ ತೆಕ್ಕೆಗೆ ಪಡೆಯಲು ಕಸರತ್ತು ಮಾಡ್ರಿದ್ದಾರೆ. ಆದ್ರೆ, ಕಾಂಗ್ರೆಸ್​ ನಾಯಕರು ಕ್ಷೇತ್ರದತ್ತ ಮುಖ ಮಾಡ್ತಿಲ್ಲ.

ಹಾಸನ ಪರಿಷತ್​​​​ ಪ್ರಚಾರಕ್ಕೆ ಬಾರದ ರಾಜ್ಯ ‘ಕೈ’ಪಡೆ
ಪರಿಷತ್​​​​ನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕೈ ಪಡೆ ತಂತ್ರ ಹೆಣೆಯುತ್ತಿದ್ದು, ಇತರ ಕ್ಷೇತ್ರಗಳಲ್ಲಿ ರಾಜ್ಯ ಕೈ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ, ಕಾಂಗ್ರೆಸ್​ ನಾಯಕರು ಅದ್ಯಾಕೋ ಹಾಸನ ಪರಿಷತ್​​​​ ಪ್ರಚಾರಕ್ಕೆ ಮಾತ್ರ ಬರ್ತಿಲ್ಲ. ಇದ್ರಿಂದ ಕ್ಷೇತ್ರದಲ್ಲಿ ಜೆಡಿಎಸ್​ ನಾಯಕರು ನಿರಾಳವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಬಾರದಿರೋದು ಹಲವು ಪಶ್ನೆಗಳಿಗೂ ಎಡೆಮಾಡಿಕೊಟ್ಟಿದೆ.

ಜೋಡೆತ್ತು ಗೈರು.. ದಳದಲ್ಲಿ ಹುಮ್ಮಸ್ಸು!
ಪ್ರಶ್ನೆ 1 : ಕುಟುಂಬ ರಾಜಕಾರಣ ವಿರುದ್ಧ ಟೀಕಿಸಿ ಪ್ರಚಾರಕ್ಕೆ ಸಿದ್ದು ಗೈರಾಗಿದ್ಯಾಕೆ?
ಪ್ರಶ್ನೆ 2 : ಮಾಜಿ ಸಚಿವ ರೇವಣ್ಣ ನಡುವಿನ ಬಾಂಧವ್ಯದ ಕಾರಣ ಸಿದ್ದು ಗೈರಾದ್ರಾ?
ಪ್ರಶ್ನೆ 3 : ರೇವಣ್ಣ ಪುತ್ರ ಪರಿಷತ್ ಪ್ರವೇಶಕ್ಕೆ ಡಿಕೆಶಿ ಬಾಹ್ಯ ಬೆಂಬಲ ನೀಡಿದ್ರಾ?
ಪ್ರಶ್ನೆ 4 : ಹಾಸನ ದಳ ಅಭ್ಯರ್ಥಿ ಪ್ರಬಲರಾಗಿದ್ದಾರೆ ಎಂಬ ಕಾರಣಕ್ಕೆ ದೂರಾದ್ರಾ?
ಪ್ರಶ್ನೆ 5 : ದಳ-ಕಮಲ ದೋಸ್ತಿ ಬಗ್ಗೆ ಮಾತಾಡುವ ಕೈಪಡೆ ಹಾಸನದಲ್ಲಿ ಮೌನವೇಕೆ?
ಪ್ರಶ್ನೆ 6 : ಹಾಸನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯನ್ನ ಹರಕೆಯ ಕುರಿ ಮಾಡಿದ್ರಾ?
ಪ್ರಶ್ನೆ 7 : ಭವಿಷ್ಯದ ಕಾರಣ ದಳಪತಿ ಜೊತೆ ತೀರ ವಿರಸ ಬೇಡ ಎಂಬ ತೀರ್ಮಾನವಾ?

ಇತರ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮಾಡ್ತಿರೋ ಕಾಂಗ್ರೆಸ್​ ರಾಜ್ಯ ನಾಯಕರು ಹಾಸನ ಪರಿಷತ್​ ಪ್ರಚಾರಕ್ಕೆ ಯಾಕೆ ಬರ್ತಿಲ್ಲ? ಹಾಸನವನ್ನ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದಾರೆ ಅಂತಾ ಕ್ಷೇತ್ರದ ಕಾರ್ಯಕರ್ತರೇ ಚರ್ಚೆ ಮಾಡ್ತಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್​ ನಾಯಕರು ಯಾವ ರೀತಿ ಉತ್ತರ ಕೊಡ್ತಾರೆ? ಕಾದು ನೋಡ್ಬೇಕು.

ವಿಶೇಷ ವರದಿ: ಶಿವಪ್ರಸಾದ್

News First Live Kannada


Leave a Reply

Your email address will not be published. Required fields are marked *