ಹಾಸನ: ಮಿತಿ ಮೀರಿದ ಕಾಡಾನೆ ಹಾವಳಿ; ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ ಪ್ರತ್ಯಕ್ಷವಾದ 35 ಆನೆ | More than 35 wild elephants attack paddy crop at sakleshpur near hassan


ಹಾಸನ: ಮಿತಿ ಮೀರಿದ ಕಾಡಾನೆ ಹಾವಳಿ; ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ ಪ್ರತ್ಯಕ್ಷವಾದ 35 ಆನೆ

ಭತ್ತದ ಗದ್ದೆಯಲ್ಲಿ ಅಲೆದಾಡುತ್ತಿರು 35 ಆನೆಗಳು

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಭತ್ತದ ಗದ್ದೆಗೆ ಗಜಪಡೆಗಳು ಲಗ್ಗೆಯಿಟ್ಟಿದ್ದು, ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ 35 ಆನೆಗಳು ಪ್ರತ್ಯಕ್ಷವಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕುಂಬಾರಕಟ್ಟೆ ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟಿದೆ. ಕಾಡಾನೆ ಹಾವಳಿಯಿಂದ ಬೇಸತ್ತು ನೆನ್ನೆ (ನವೆಂಬರ್ 20) ರೈತರು (Farmers) ಗೆದ್ದಾರಿ ತಡೆ ನಡೆಸಿದ್ದು, ವಿಷದ ಬಾಟಲ್ ಕೈಯಲ್ಲಿ ಹಿಡಿದು ಹೋರಾಟ ಮಾಡಿದ್ದಾರೆ. ಆದರೆ ನೆನ್ನೆಯೇ ಭಾರಿ ಸಂಖ್ಯೆಯಲ್ಲಿ ಆನೆ ಹಿಂಡು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಸದ್ಯ ಭತ್ತದ ಗದ್ದೆಯಲ್ಲಿ ಅಲೆದಾಡುತ್ತಿರುವ 35 ಆನೆಗಳ (Elephant) ಹಿಂಡಿನ ವಿಡಿಯೋ ವೈರಲ್ ಆಗಿದೆ.

ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈತರು ಈಗಾಗಲೇ ಹೋರಾಟಕ್ಕೆ ಮುಂದಾಗಿದ್ದು, ನಿನ್ನೆಯೇ ಸಂಜೆ ಭತ್ತದ ಗದ್ದೆಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಹೀಗಾಗಿ ರೈತರು ಹೀಗೆ ಆದರೆ ಬೆಳೆ ಬೆಳೆಯುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ದನ, ಕರುಗಳ ಜೊತೆ ಕಾಡಾನೆ ಪರೇಡ್; ಅಪರೂಪದ ವಿಡಿಯೋ ನೋಡಿ

ಹಾಸನದಲ್ಲಿ ಒಂದೇ ಕಡೆ ಬೀಡುಬಿಟ್ಟಿರುವ 35ಕ್ಕೂ ಹೆಚ್ಚು ಕಾಡಾನೆಗಳು; ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *