ಹಾಸನ: ಮ್ಯಾನ್​ಹೋಲ್​ಗೆ ಪೌರಕಾರ್ಮಿಕರನ್ನು ಇಳಿಸಿ ಸ್ವಚ್ಛತೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ | Hassan News Manhole Cleaning Issue in Town Panchayat details here


ಹಾಸನ: ಮ್ಯಾನ್​ಹೋಲ್​ಗೆ ಪೌರಕಾರ್ಮಿಕರನ್ನು ಇಳಿಸಿ ಸ್ವಚ್ಛತೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮ್ಯಾನ್​ಹೋಲ್

ಹಾಸನ: ಮ್ಯಾನ್​ಹೋಲ್​ಗೆ ಪೌರ ಕಾರ್ಮಿಕರನ್ನು ಇಳಿಸಿ ಕ್ಲೀನಿಂಗ್ ಮಾಡಿಸಿದ ಅಮಾನವೀಯ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. ಒಳಚರಂಡಿ ಚೇಂಬರ್​ಗೆ ಪೌರಕಾರ್ಮಿಕರನ್ನು ಇಳಿಸಿ​ ಸ್ವಚ್ಛತೆ ಮಾಡಿಸಲಾಗಿದೆ. ಮ್ಯಾನ್​ಹೋಲ್​ಗೆ ಇಳಿಸದಂತೆ ನಿರ್ಬಂಧವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಹೊಳೆನರಸೀಪುರ ಪಟ್ಟಣ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ 17ನೇ ವಾರ್ಡ್​ನಲ್ಲಿ ಮ್ಯಾನ್​ಹೋಲ್​ ಅನ್ನು ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಸಕ್ಕಿಂಗ್​ ಯಂತ್ರವಿದ್ದರೂ ಬಳಸದೆ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಕೇಳಿಬಂದಿದೆ. ಬೇಜವಾಬ್ದಾರಿಯುತ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ರಾಮನಗರ: ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಮಹಿಳೆ ಸಾವು
ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಲಕ್ಷ್ಮಮ್ಮ(60) ದುರ್ಮರಣವನ್ನಪ್ಪಿದ್ದಾರೆ. ಹೊಲಕ್ಕೆ ಹೋಗುವಾಗ ವಿದ್ಯುತ್​ ತಂತಿ ತುಳಿದು ಘಟನೆ ಸಂಭವಿಸಿದೆ. ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕಮಗಳೂರು: ನಿರ್ಮಾಣ ಹಂತದ ಮನೆಯ ಸಂಪ್​​ಗೆ ಬಿದ್ದು ಇಬ್ಬರ ಸಾವು
ನಿರ್ಮಾಣ ಹಂತದ ಮನೆಯ ಸಂಪ್​​ಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಸಂಪ್​ಗೆ ಬಿದ್ದು ಕುಮಾರ್(50), ವಸಂತ್(35) ಸಾವನ್ನಪ್ಪಿದ್ದಾರೆ. ಕಲೀಮ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹಾಸನ: 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ; ಬೇರೊಂದು ಯುವತಿ ಜತೆ ಎಂಗೇಜ್ಮೆಂಟ್

ಇದನ್ನೂ ಓದಿ: ಹಾಸನದಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿಬಿದ್ದು ಲಕ್ಷಾಂತರ ಬೆಲೆಯ ಪಾದರಕ್ಷೆಗಳು ಭಸ್ಮ, ಶಾರ್ಟ್ ಸರ್ಕ್ಯೂಟ್​ನಿಂದಾದ ಅವಗಢ

TV9 Kannada


Leave a Reply

Your email address will not be published. Required fields are marked *