ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾರದಲ್ಲಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೆ ಈ ಆದೇಶವನ್ನ ಉಸ್ತುವಾರಿ ಸಚಿವ ಗೋಪಾಲಯ್ಯ ವಾಪಸ್ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಎಂದಿನಂತೆ ಜನತಾ ಕರ್ಫ್ಯೂ ಜಾರಿಯಲಿರುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಕ್ಷಣಕೊಂದು ನಿರ್ಧಾರದಿಂದ ಜಿಲ್ಲೆಯ ಜನತೆಗೆ ಗೊಂದಲ ಸೃಷ್ಠಿಯಾಗಿದೆ.

The post ಹಾಸನ ಲಾಕ್​ಡೌನ್ ಆದೇಶ ವಾಪಸ್ ಪಡೆದ ಸಚಿವ ಗೋಪಾಲಯ್ಯ appeared first on News First Kannada.

Source: newsfirstlive.com

Source link