ಹಾಸ್ಟೆಲ್​ಗೆ​ ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ: ಅಲ್ಲಾಹು ಅಕ್ಬರ್ ಎಂದು ಕೂಗುವಂತೆ ಒತ್ತಾಯ, ದೂರು ದಾಖಲು – Hyderabad: Student Himank Bansal beaten up and forced to chant Allah-hu-Akbar in college hostel, complaint filed


20 ಜನರ ವಿದ್ಯಾರ್ಥಿಗಳ ಗುಂಪು ಎಲ್‌ಎಲ್‌ಬಿ ಮೊದಲ ವರ್ಷದ ವಿದ್ಯಾರ್ಥಿ ಹಿಮಾಂಕ್ ಮೇಲೆ ಹಲ್ಲೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಸ್ಟೆಲ್​ಗೆ​ ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ: ಅಲ್ಲಾಹು ಅಕ್ಬರ್ ಎಂದು ಕೂಗುವಂತೆ ಒತ್ತಾಯ, ದೂರು ದಾಖಲು

ಹಾಸ್ಟೆಲ್​ಗೆ​ ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ

ಹೈದರಾಬಾದ್: ತೆಲಂಗಾಣದ (telangana)  ರಂಗರೆಡ್ಡಿ ಜಿಲ್ಲೆಯ ದೋಂತನಪಾಳ್ಯದಲ್ಲಿರುವ ಹಾಸ್ಟೆಲ್​ಗೆ (Hostel) ನುಗ್ಗಿ ವಿದ್ಯಾರ್ಥಿಗೆ (Student) ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡು ಒಂದನೇ ವರ್ಷದ ಎಲ್​ಎಲ್​ಬಿ ಓದುತ್ತಿರುವ ಹಿಮಾಂಕ್​ ಬನ್ಸಾಲ್​ಗೆ ಥಳಿಸಿದ್ದಾರೆ. ಅಲ್ಲದೇ “ಅಲ್ಲಾ ಹು ಅಕ್ಬರ್”​ ಕೂಗುವಂತೆ ಹಲ್ಲೆಕೋರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಿಮಾಂಕ್​ ಬನ್ಸಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಹಲ್ಲೆಗೊಳಗಾದ ಹಿಮಾಂಕ್ ಶಂಕರಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಧೋಂತನಪಲ್ಲಿಯ ಐಬಿಎಸ್‌ ಕಾಲೇಜು ಹಾಸ್ಟೆಲ್‌ನಲ್ಲಿ ಇರುವಾಗ 20ಕ್ಕೂ ಹೆಚ್ಚು ಜನರು ನುಗ್ಗಿ ಬಂದು ಥಳಿಸಿದ್ದಾರೆ. ಅಲ್ಲದೇ ಅಲ್ಲಾಹು ಅಕ್ಬರ್‌ ಎಂದು ಕೂಗಲು ಒತ್ತಾಯಿಸಿದ್ದಾರೆ ದೂರಿನಲ್ಲಿ ಆರೋಪಿಸಿದ್ದಾರೆ.

ಹಿಮಾಂಕ್​ ಬನ್ಸಾಲ್ ನೀಡಿದ ದೂರಿನ ಅನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 342, 450, 323 ಮತ್ತು 506 (ಬೆದರಿಕೆ), ಸೆಕ್ಷನ್ 149 ಮತ್ತು ಸೆಕ್ಷನ್ 4(4) I), (II), ಮತ್ತು (III) ರ್ಯಾಗಿಂಗ್ ನಿಷೇಧ ಕಾಯಿದೆ 2011 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ದೂರುದಾರ (ಹಿಮಾಂಕ್​ ಬನ್ಸಾಲ್) ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್​ನಲ್ಲಿ ಅವಮಾನಿಸಿದ್ದಾನೆ. ಅವಳು ಈ ಬಗ್ಗೆ ತನ್ನ ಸ್ನೇಹಿತರಿಗೆ ತಿಳಿಸಿದ್ದಾಳೆ. ಇದರಿಂದ ಗುಂಪುಗೂಡಿ ಬಂದು ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರ ಪೈಕಿ ಈಗಾಗಲೇ 10 ಮಂದಿಯನ್ನು ನಮ್ಮ ಪೊಲೀಸರು ಗುರುತಿಸಿದ್ದು, ತನಿಖೆ ಆರಂಭಿಸಿದ್ದಾರೆ. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *