‘ಹಿಂಗೂ ಲವ್​ ಮಾಡಬಹುದಾ? ಕ್ಲೈಮ್ಯಾಕ್ಸ್​ನಲ್ಲಿ ಕಣ್ಣೀರು’; ‘ಪ್ರೇಮಂ ಪೂಜ್ಯಂ’ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ | Lovely Star Prem starrer Premam Poojyam movie first day first show audience reaction


‘ಲವ್ಲೀ ಸ್ಟಾರ್​’ ಪ್ರೇಮ್​ (Nenapirali Prem) ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ ಬಿಡುಗಡೆ ಆಗಿದೆ. ಇಂದು (ನ.12) ಫಸ್ಟ್​ ಡೇ ಫಸ್ಟ್​ ಶೋ ನೋಡಿ ಬಂದ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಪಕ್ಕಾ ಲವ್​ ಸ್ಟೋರಿ ಸಿನಿಮಾ. ತುಂಬ ಕಲರ್​ಫುಲ್ ಆಗಿ ‘ಪ್ರೇಮಂ ಪೂಜ್ಯಂ ಮೂಡಿಬಂದಿದೆ. ಪ್ರೇಮ್​ಗೆ ನಾಯಕಿಯರಾಗಿ ಐಂದ್ರಿತಾ ರೇ ರೇ (Aindrita Ray), ಮತ್ತು ಬೃಂದಾ ಆಚಾರ್ಯ (Brinda Acharya) ನಟಿಸಿದ್ದಾರೆ. ‘ಸಿನಿಮಾ ಸೂಪರ್ ಆಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಅಳು ಬರುತ್ತೆ. ಹಿಂಗೂ ಲವ್​ ಮಾಡಬಹುದಾ ಅಂತ ಅನಿಸುತ್ತದೆ. ಒಳ್ಳೆಯ ಮೆಸೇಜ್​ ಇದೆ. ಬಂಧನ ಸಿನಿಮಾ ನೋಡಿದಂತೆ ಆಯಿತು’ ಎಂಬಿತ್ಯಾದಿ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ ಇದೆ. ಚಿಟಪಟ ಮಳೆ ಸುರಿಯುತ್ತಲೇ ಇದೆ. ಅದರ ನಡುವೆಯೂ ಜನರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಆಗಿದೆ. ಇದು ‘ಲವ್ಲೀ ಸ್ಟಾರ್​’ ಪ್ರೇಮ್​ ಅಭಿನಯದ 25ನೇ ಸಿನಿಮಾ ಎಂಬುದು ವಿಶೇಷ. ಗುರುವಾರ (ಸೆ.11) ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗಿತ್ತು. ನಟ ಶರಣ್​, ಖ್ಯಾತ ನಿರ್ದೇಶಕ ತರುಣ್​ ಸುಧೀರ್​,  ‘ದಿಯಾ’ ಸಿನಿಮಾ ನಟಿ ಖುಷಿ ರವಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಡ ‘ಪ್ರೇಮಂ ಪೂಜ್ಯಂ’ ನೋಡಿ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ:

‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ; ಯಾವ ಹೀರೋ ಜೊತೆ ಸಿನಿಮಾ?

‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್​ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು

TV9 Kannada


Leave a Reply

Your email address will not be published. Required fields are marked *