ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಬೆದರಿಕೆ ಆರೋಪ; ಮಂಗಳೂರು ಜಿಲ್ಲಾಧಿಕಾರಿಯಿಂದ ದೂರು ದಾಖಲು | Mangaluru DC KV Rajendra files complaint against Hindu Jagarana Vedike Leader Jagadish Karanth

ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಬೆದರಿಕೆ ಆರೋಪ; ಮಂಗಳೂರು ಜಿಲ್ಲಾಧಿಕಾರಿಯಿಂದ ದೂರು ದಾಖಲು

ಜಗದೀಶ್ ಕಾರಂತ್ (ಸಂಗ್ರಹ ಚಿತ್ರ)

ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ದೂರು ನೀಡಿದ್ದಾರೆ. ನವೆಂಬರ್ 22ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿ ಭಾಷಣ ಮಾಡುವ ವೇಳೆ, ಜಿಲ್ಲಾಧಿಕಾರಿ ಕೊರಳಪಟ್ಟಿ ಹಿಡಿಯುತ್ತೇವೆ ಎಂದು ಬಹಿರಂಗ ಬೆದರಿಕೆ ಹಾಕಿದ ಹಿನ್ನೆಲೆ ಜಗದೀಶ್ ಕಾರಂತ್ ವಿರುದ್ಧ ದೂರು ದಾಖಲಿಸಲಾಗಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆಯಲ್ಲಿ ನಾಲಿಗೆ ಹರಿಬಿಟ್ಟಿದ್ದ ಜಗದೀಶ್ ಕಾರಂತ್ ವಿರುದ್ಧ ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆಯಲ್ಲಿ ಭಾಷಣದ ವೇಳೆ ಜಗದೀಶ್ ಕಾರಂತ್ ಬಹಿರಂಗ ಬೆದರಿಕೆ ಹಾಕಿದ್ದರು. ಹೀಗಾಗಿ ಡಿಸಿ ಡಾ.ಕೆ.ವಿ. ರಾಜೇಂದ್ರ ಠಾಣೆಗೆ ದೂರು ನೀಡಿದ್ದಾರೆ.

ಎಸ್‌ಡಿಪಿಐ, ಎಬಿವಿಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಎಸ್‌ಡಿಪಿಐ, ಎಬಿವಿಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದೆ. ವಿದ್ಯಾರ್ಥಿನಿಗೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ. ಎಬಿವಿಪಿ ಕಾರ್ಯಕರ್ತರಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಬೆನ್ನಲ್ಲೇ ಕಾಲೇಜಿಗೆ ನುಗ್ಗಿ SDPI, CFI ಗಲಾಟೆ ಮಾಡಿದೆ. ಗಲಾಟೆ ಬಳಿಕ ಕಾಲೇಜಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಗಿದೆ. ಕೇಸರಿ ಶಾಲು ಧರಿಸಿ‌ ಕಾಲೇಜಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್​ನಲ್ಲಿದ್ದ ಸಿಐಎಸ್‌ಎಫ್ ಡಿಟೆಕ್ಟಿವ್ ಶ್ವಾನ ಸಾವು, ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ

ಇದನ್ನೂ ಓದಿ: ಮಂಗಳೂರು: ಭಾರತ ಸರ್ಕಾರದಿಂದ ಅಮಾನ್ಯಗೊಂಡ ಹಳೆ ನೋಟು ಪತ್ತೆ; ನಾಲ್ವರ ಬಂಧನ

TV9 Kannada

Leave a comment

Your email address will not be published. Required fields are marked *