ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೆ ವಾಗ್ದಾಳಿ ನಡೆಸಿದ್ದು ಸಿಂಧೂರಿ ಅವರ ಕಾರ್ಯ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೋಹಿಣಿ ಸಿಂಧೂರಿ ಅವರು ಹಿಂದಿನ ಡಿಸಿ ಅಭಿರಾಂ ಜೀ ಶಂಕರ್ ರಂತೆ ಜನ ಮನ್ನಣೆ ಗಳಿಸುವ ಕೆಲಸ ಮಾಡಲಿ.. ಮೈಸೂರು ಗ್ರಾಮಾಂತರ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ತೆರಳಿ ಕೊರೊನಾ ನಿಯಂತ್ರಿಸಲಿ.. ನಗರದಲ್ಲಿ ಕುಳಿತು ಕೆಲಸ ಮಾಡಿದರೆ ಸಾಲದು.

ಮೈಸೂರಿನಲ್ಲಿ ಮೂರು ಮಂದಿ IAS ಅಧಿಕಾರಿಗಳು ಇದ್ದಾರೆ. ಹಿಂದಿನ ಡಿಸಿ ಅಭಿರಾಂ ಜಿ ಶಂಕರ್, ಶಿಖಾ, ರಂದೀಪ್ ಉತ್ತಮ ಕಾರ್ಯ ಮಾಡಿದ್ದಾರೆ. ಹಿಂದಿನ ಡಿಸಿಗಳ ಕಾರ್ಯ ವೈಖರಿಗೆ ಜನ ಪುಷ್ಪಾರ್ಚನೆಗೈದು ಗೌರವಿಸಿದ್ದಾರೆ. ಅದನ್ನ ಅರಿತು ಇಂದಿನ ಡಿಸಿ ಕಾರ್ಯ ನಿರ್ವಹಿಸಲಿ ಎಂದು ಮೈಸೂರಿ‌ನಲ್ಲಿ ರೋಹಿಣಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲೀಗ ರೋಹಿಣಿ ಸಿಂಧೂರಿ V/s ಜನಪ್ರತಿನಿಧಿಗಳು- ಪ್ರತಾಪ್‌ ಸಿಂಹ ಸಹ ಗುಡುಗು

The post ಹಿಂದಿನ ಡಿಸಿಗಳಿಗೆ ಹೋಲಿಸಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದ ಪ್ರತಾಪ್ ಸಿಂಹ appeared first on News First Kannada.

Source: newsfirstlive.com

Source link