ಹಿಂದುತ್ವ ಮತ್ತು ಹಿಂದೂಯಿಸಂ ನಡುವಿನ ವ್ಯತ್ಯಾಸ ತಿಳಿಸಿದ ರಮ್ಯಾ; ವಾಸ್ತವ ವಿವರಿಸಿ ಬೇಸರ ವ್ಯಕ್ತಪಡಿಸಿದ ನಟಿ | Ramya Divya Spandana explains difference between Hindutva and Hinduism


ಹಿಂದುತ್ವ ಮತ್ತು ಹಿಂದೂಯಿಸಂ ನಡುವಿನ ವ್ಯತ್ಯಾಸ ತಿಳಿಸಿದ ರಮ್ಯಾ; ವಾಸ್ತವ ವಿವರಿಸಿ ಬೇಸರ ವ್ಯಕ್ತಪಡಿಸಿದ ನಟಿ

ಹಿಂದುತ್ವ ಮತ್ತು ಹಿಂದೂಯಿಸಂ ಬಗ್ಗೆ ರಮ್ಯಾ ಸೋಶಿಯಲ್​ ಮೀಡಿಯಾ ಪೋಸ್ಟ್​

‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ (Ramya) ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದಷ್ಟು ಬೇಗ ಅವರು ಕಮ್​ಬ್ಯಾಕ್​ ಮಾಡುತ್ತಾರೆ ಎಂಬ ಸುದ್ದಿ ಕೂಡ ಆಗಾಗ ಕೇಳಿಬರುತ್ತಲೇ ಇರುತ್ತದೆ. ಹೊಸ ಸಿನಿಮಾ ಒಪ್ಪಿಕೊಳ್ಳದಿದ್ದರೂ ಕೂಡ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ರಮ್ಯಾ ದಿವ್ಯಾ ಸ್ಪಂದನಾ (Ramya Divya Spandana) ಇನ್​ಸ್ಟಾಗ್ರಾಮ್​ ಖಾತೆ ಮೂಲಕ ಹಲವು ಪೋಸ್ಟ್​ಗಳನ್ನು ಮಾಡುತ್ತ ತಮ್ಮ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಹಿಂದುತ್ವ (Hindutva) ಮತ್ತು ಹಿಂದೂಯಿಸಂ (Hinduism) ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿದ್ದಾರೆ. ಅವರ ಈ ಪೋಸ್ಟ್​ ಗಮನ ಸೆಳೆಯುತ್ತಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಬೇರೆ ಬೇರೆ ಎಂದು ರಮ್ಯಾ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

‘ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ. ಹಿಂದೂಯಿಸಂ ಎಂಬುದು ರಾಜಕೀಯವಲ್ಲ. ಆದರೆ ಹಿಂದುತ್ವ ಎಂಬುದು ರಾಜಕೀಯವಾಗಿದೆ. ಹಿಂದೂಯಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವಂತದ್ದು ಮತ್ತು ಎಲ್ಲರಿಗೂ ಪ್ರೀತಿ ಹಂಚುವಂತದ್ದು. ಅದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ವ್ಯತ್ಯಾಸ ತಿಳಿಯುತ್ತದೆ’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.

‘ನಮ್ಮ ಪುರಾತನ ಹಿಂದೂ ಧರ್ಮವು ರಾಜಕಾರಣಿಗಳಿಂದ ಒಂದು ರಾಜಕೀಯ ಸಾಧನವಾಗಿ ಬಳಕೆ ಆಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದೂ ಅಷ್ಟೇ. ಯಾವ ಪಕ್ಷ ಕೂಡ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ’ ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ಕಮೆಂಟ್​ ಮಾಡಿರುವ ಅನೇಕರು ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ ಮತ್ತು ನಟಿಯ ಮಾತುಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ವಿರೋಧಿಸಿದ್ದಾರೆ. ನಿಮ್ಮಿಂದ ನಾವು ಹಿಂದೂ ಧರ್ಮದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂದು ಕುಟುಕಿದ್ದಾರೆ.

ರಮ್ಯಾ ಅವರು ರಾಜಕೀಯದತ್ತ ಮುಖ ಮಾಡಿದ ಬಳಿಕ ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಜೊತೆಗಿನ ಸ್ನೇಹ ಕಡಿದುಕೊಂಡಿಲ್ಲ. ಅನೇಕ ಸ್ಟಾರ್​ಗಳ ಜೊತೆ ಅವರು ಸಂಪರ್ಕದಲ್ಲಿ ಇದ್ದಾರೆ. ಇತ್ತೀಚೆಗೆ ಪುನೀತ್​ ನಿಧನರಾದಾಗ ರಮ್ಯಾ ಕೂಡ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಪುನೀತ್​ ಜೊತೆಗಿನ ಒಡನಾಟವನ್ನು ನೆನೆದು ಅವರು ಭಾವುಕರಾಗಿದ್ದರು. ಕೆಲವೇ ದಿನಗಳ ಹಿಂದೆ ಕೂಡ ತಾವು ಅಪ್ಪು ಜೊತೆ ಫೋನ್​ನಲ್ಲಿ ಮಾತನಾಡಿದ್ದಾಗಿ ತಿಳಿಸಿದ್ದರು.

ಇದನ್ನೂ ಓದಿ:

Puneeth Rajkumar: ಅಳುತ್ತಾ ಅಪ್ಪು ಬಗ್ಗೆ ಮಾತಾಡಿದ ರಮ್ಯಾ; ಕೆಲವೇ ದಿನಗಳ ಹಿಂದೆ ನಡೆದಿತ್ತು ಕಮ್​ಬ್ಯಾಕ್​​ ಚರ್ಚೆ​

Aryan Khan: ಆರ್ಯನ್​ಗೆ ಜಾಮೀನು: ಒಂದೇ ಮಾತಲ್ಲಿ ರಮ್ಯಾ ಪ್ರತಿಕ್ರಿಯೆ; ಖುಷಿಪಟ್ಟ ಸೆಲೆಬ್ರಿಟಿಗಳು ಯಾರೆಲ್ಲ?

TV9 Kannada


Leave a Reply

Your email address will not be published. Required fields are marked *