ಹಿಂದುಸ್ಥಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಬಾರದು: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ – Hindus should not become a minority in India: Gangadharendra Saraswati Swamiji


ಹಿಂದೂಗಳು ಮೂರು ತಪ್ಪುಗಳನ್ನು ಮಾಡುತಿದ್ದಾರೆ ಎಂದು ಶಿರಸಿಯ ಹಿಂದೂ ಸಮಾವೇಶದಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಹಿಂದುಸ್ಥಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಬಾರದು: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಸ್ವರ್ಣವಲ್ಲಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮಿಜೀ

ಕಾರವಾರ: ಹಿಂದುಸ್ಥಾನದಲ್ಲಿ ಹಿಂದೂಗಳ (Hindu) ಸಂಖ್ಯೆ ಕಡಿಮೆಯಾಗಬಾರದು. ಜೊತೆಗೆ ಅಲ್ಪಸಂಖ್ಯಾತರಾಗಬಾರದು. ಹಿಂದೂಗಳು ಮೂರು ತಪ್ಪುಗಳನ್ನು ಮಾಡುತಿದ್ದಾರೆ ಎಂದು ಶಿರಸಿಯ ಹಿಂದೂ ಸಮಾವೇಶದಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ (Gangadharendra Saraswati Swamiji) ಹೇಳಿದರು. ಬೇರೆ ಸಮುದಾಯದವರು 15ನೇ ವರ್ಷಕ್ಕೆ ಮದುವೆ ಮಾಡುತ್ತಾರೆ. ಹಮ್ ದೋ ಹಮಾರೆ ದಸ್​ ಎನ್ನುತ್ತಾರೆ. ಆದರೆ ಹಿಂದುಗಳು 30 ವರ್ಷವಾದರೂ ಮದುವೆ ಆಗಲ್ಲ. ಹಮ್ ದೋ ಹಮಾರೆ ಏಕ್ ಬಸ್ ಎನ್ನುತ್ತಾರೆ ಎಂದರು. ಇದಕ್ಕೆ ಕಾನೂನಿನ ತೊಡಕು ಸಹ ಕಾರಣವಾಗಿದೆ. ಹಿಂದೂ ಸಮಾಜಕ್ಕೆ ಒಂದು ಕಾನೂನಾದರೆ, ಬೇರೆ ಸಮಾಜಕ್ಕೆ ಬೇರೆ ಕಾನೂನು ಇದೆ. ಹಿಂದೂ ಸಂತತಿಯನ್ನ ಅತೀ ನಿಯಂತ್ರಣ ಮಾಡುತ್ತಿದ್ದಾರೆ. ಹೆಚ್ಚು ಮಕ್ಕಳನ್ನು ಹಿಂದೂಗಳು ಪಡೆಯಬೇಕು ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಹಿಂದೂಗಳಲ್ಲಿ ಹಿಂದೂ ಸಂತಾನ ಕಡಿಮೆಯಾಗುತ್ತಿದೆ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಹಿಂದೂ ಸಂಪ್ರದಾಯದಲ್ಲಿ ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿದ್ದು ಇದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ತಡವಾಗಿ ಮದುವೆಯಾದವರಲ್ಲಿ ವಿವಾಹ ವಿಚ್ಛೇದನ ಆಗುತ್ತಿವೆ. ಸೂಕ್ತ ಸಮಯದಲ್ಲಿ ಮದುವೆಯಾದರೆ ಹೆಚ್ಚು ಸಶಕ್ತ ಮಕ್ಕಳನ್ನು ಸಮಾಜಕ್ಕೆ ಕೊಡಬಹುದು. ಸಂತತಿಯ ಅತೀ ನಿಯಂತ್ರಣದಿಂದಾಗಿ ಹಿಂದೂಗಳಲ್ಲಿ ಹಿಂದೂ ಸಂತಾನ ಕಡಿಮೆಯಾಗುತ್ತಿದೆ. ಹಿಂದುಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಬಾರದು. ಬೇರೆ ಸಮಾಜಕ್ಕೆ ಬೇರೆ ದೇಶದ ಆಶ್ರಯ ಇದೆ. ಆದರೆ ಹಿಂದೂಗಳಿಗೆ ಹಿಂದುಸ್ಥಾನ ಒಂದೇ ಗತಿ. ಈ ಅಪಾಯ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.