ಹಿಂದೂತ್ವ ಉಳಿಸಬೇಕೆನ್ನುವ RSS ಹಿಂದೆಯಿತ್ತು.. ಈಗಿರುವುದು..- ಪ್ರಜ್ವಲ್ ರೇವಣ್ಣ ಕಿಡಿ

ಹಾಸನ: ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಆರ್​ಎಸ್​ಎಸ್​ ವಿರುದ್ಧ ಕಿಡಿಕಾರಿದ್ದಾರೆ. 1970 ರಲ್ಲಿ ಆರ್.ಆರ್.ಎಸ್. ಸಂಘಟನೆಗೆ ದೇವೇಗೌಡರು ಭೇಟಿ ನೀಡಿದ್ದರು ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.. 1970 ರಲ್ಲಿ ಇದ್ದ ಆರ್.ಎಸ್.ಎಸ್. ಬೇರೆ ಈಗಿರುವ ಆರ್.ಎಸ್.ಎಸ್. ಬೇರೆ. ಈಗಿರುವ RSS ಗೂ ಆಗಿನ RSS ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಲು RSS ಮೇಲೆ ದಾಳಿ? ವಿಪಕ್ಷಗಳ ಪ್ಲಾನ್​ ಏನು?

ಈಗಿರುವವರು ಅಧಿಕಾರಕ್ಕೋಸ್ಕರ ವ್ಯಾಮೋಹವಿರೋ ಆರ್.ಎಸ್.ಎಸ್.. ಹಿಂದೂತ್ವ ಉಳಿಸಬೇಕೆನ್ನುವ RSS ಹಿಂದೆಯಿತ್ತು. ಆರ್ ಎಸ್ ಎಸ್ ಎಂದರೆ ಏನು, ಹಿಂದೆ ಆರ್ ಎಸ್ ಎಸ್ ಹೇಗಿತ್ತು, ಹೇಗೆ ಬೆಳೆದು ಬಂತು ತಿಳಿದುಕೊಳ್ಳಲಿ. ಈಗ ಯಾರೂ ಬಿಜೆಪಿ ಅಂತಾ ಹೇಳುತ್ತಿಲ್ಲ. ಕೆಲವು ದಿನಗಳಲ್ಲಿ ಬಿಜೆಪಿ ಹೆಸರು ಹೋಗಿ ಆರ್.ಎಸ್.ಎಸ್. ಆಗುತ್ತೆ.

ಇದನ್ನೂ ಓದಿ: ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು- ಹೆಚ್. ಡಿ. ದೇವೇಗೌಡ

ಕುಮಾರಣ್ಣ ಹೇಳಿರುವುದರಲ್ಲಿ ತಪ್ಪೇನಿದೆ..? ಕೆಲವು ದಿನಗಳ‌ ಹಿಂದೆ ಒಂದು ವಿಡಿಯೋ ‌ನೋಡಿದ್ದೆ. ತುಮಕೂರಿನ ಬಿಜೆಪಿ ಮುಖಂಡ ಆರ್.ಎಸ್.ಎಸ್.ನವರು ಭ್ರಷ್ಟರೆಂದು ಬೈದಿದ್ದಾರೆ. ಆರ್ ಎಸ್ ಎಸ್ ಏನು ಅಂತಾ ಅವರ ಸ್ವಂತ ಪಕ್ಷದವರೇ ತಿಳಿಸಿದ್ದಾರೆ. ವಿಡಿಯೋದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ಕತ್ತಲು ಎಲ್ಲಿ ಇರುತ್ತೋ, ಬೆಳಕು ಅಲ್ಲೇ ಇರುತ್ತೆ. ಸಾರ್ವಜನಿಕರು ಬೆಳಕು ನೋಡುವುದು ಬಿಟ್ಟು ಕತ್ತಲು ನೋಡಬೇಕಾಗುತ್ತದೆ. ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಪ್ರಜ್ವಲ್ ವಾಗ್ದಾಳಿ ನಡೆಸಿದ್ದಾರೆ.

News First Live Kannada

Leave a comment

Your email address will not be published. Required fields are marked *