ಹಿಂದೂ ಕಾರ್ಯಕರ್ತನ ಹತ್ಯೆ ಹಿನ್ನೆಲೆ ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ – Section 144 in Jharkhand Town after killing of Hindu Group Chief Kannada News


ಹಿಂದೂ ಮುಖಂಡ ಕಮಲ್ ಗಿರಿ ದೇವ್ ಅವರನ್ನು ಶನಿವಾರ ಹತ್ಯೆ ಮಾಡಿದ ನಂತರ ಜಾರ್ಖಂಡ್‌ನ ಚೈಬಾಸಾದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಿಂದೂ ಕಾರ್ಯಕರ್ತನ ಹತ್ಯೆ ಹಿನ್ನೆಲೆ ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ

ಸಾಂದರ್ಭಿಕ ಚಿತ್ರ

ಜಾರ್ಖಂಡ್: 35 ವರ್ಷದ ಜಾರ್ಖಂಡ್​ನ (Jharkhand) ಹಿಂದೂ ಕಾರ್ಯಕರ್ತ ಕಮಲದೇವ್ ಗಿರಿ ಅವರನ್ನು ಶನಿವಾರ ಸಂಜೆ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದು ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚಕ್ರಧರ್‌ಪುರ ಪಟ್ಟಣದಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಚಕ್ರಧರಪುರದ ಉಪವಿಭಾಗದ ಪೊಲೀಸ್ ಅಧಿಕಾರಿ ಕಪಿಲ್ ಚೌಧರಿ ತಿಳಿಸಿದ್ದಾರೆ. ಹಿಂದೂ ಮುಖಂಡ ಕಮಲ್ ಗಿರಿ ದೇವ್ ಅವರನ್ನು ಶನಿವಾರ ಹತ್ಯೆ ಮಾಡಿದ ನಂತರ ಜಾರ್ಖಂಡ್‌ನ ಚೈಬಾಸಾದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

TV9 Kannada


Leave a Reply

Your email address will not be published.