ಹಿಂದೂ ಜನಜಾಗೃತಿ ಸಮಿತಿಗೆ 20 ವರ್ಷ: ಹರ್ ಘರ್ ಭಗವಾ ಅಭಿಯಾನ ಆರಂಭಿಸಿದ ಸಮಿತಿ | Hindu Jana Jagriti Samiti completed 20 years samiti started har ghar bhagawa abhiyan


ಹಿಂದೂ ಜನಜಾಗೃತಿ ಸಮಿತಿ 20 ವರ್ಷ ಪೂರೈಸಿದ ಹಿನ್ನೆಲೆ ಪ್ರತಿ ಮನೆಯಲ್ಲೂ ಭಗವಾಧ್ವಜ ಹಾರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಆರಂಭಿಸಿದೆ.

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿ (Hindu Jana Jagriti Samiti) 20 ವರ್ಷ ಪೂರೈಸಿದ ಹಿನ್ನೆಲೆ ಪ್ರತಿ ಮನೆಯಲ್ಲೂ ಭಗವಾಧ್ವಜ (bhagawa dhwaj)  ಹಾರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಆರಂಭಿಸಿದೆ. ಅ. 3 ಇಂದಿನಿಂದ 5ರವರೆಗೆ ಹರ್ ಘರ್ ಭಗವಾ ಅಭಿಯಾನ ಪ್ರಾರಂಭಿಸಿದೆ. ಈಗಾಗಲೇ ಈ ಬಗ್ಗೆ ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಒಂದು ಕೋಟಿ ಹಿಂದೂಗಳ ಮನೆ ಮೇಲೆ ಭಗವಾಧ್ವಜ ಹಾರಿಸಲು ಮುಂದಾಗಿದೆ. ರಾಜ್ಯದ 500 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಧರ್ಮ ರಕ್ಷಣೆಗಾಗಿ ಪ್ರತಿಜ್ಞೆ ಮಾಡಲಾಗುತ್ತಿದೆ.

ಈ ಅಭಿಯಾನಕ್ಕೆ ಈಗಾಗಲೇ 6 ಲಕ್ಷಕ್ಕೂ ಅಧಿಕ ಜನರು‌ ಸಹ ಭಾಗಿಯಾಗಿದ್ದಾರೆ. ನೀವು ಸಹಭಾಗಿಯಾಗಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಂದಿನಿಂದ ಅಕ್ಟೋಬರ್ 5 ರ ವರಗೆ ಹಿಂದೂಗಳು ತಮ್ಮ ಮನೆಯ ಮೇಲೆ ಭಗವಾ ಧ್ವಜವನ್ನು ಹಾರಿಸಬೇಕು. ನಂತರ ನಿಮ್ಮ ಹೆಸರು ಮತ್ತು ವಾಟ್ಸ್ ಆಪ್ ನಂ http://Hindurashtra.hindujagruti.org ಈ ಲಿಂಕ್​ನಲ್ಲಿ ತುಂಬಿಸಿದರೆ, ನಿಮಗೆ “ಹಿಂದೂ ರಾಷ್ಟ್ರ ವೀರ” ಪ್ರಮಾಣಪತ್ರ ನಿಮ್ಮ ವಾಟ್ಸ್ ಆಪ್ ನಂ. ಗೆ ಬರುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.

ಮನೆಯಲ್ಲಿ ಹಾರಾಡಿಸಿದ ಭಗವಾ ಧ್ವಜದ ಪೋಟೋವನ್ನು ಈ ಕೆಳಗಿನ ಸೋಶಿಯಲ್ ಮೀಡಿಯಾ ಅಕೌಂಟ್ ಗೆ ಟ್ಯಾಗ್ ಮಾಡಿ ಎಂದು ಟ್ವೀಟರ್​ ಅಕೌಟ್​ ನೀಡಿದೆ. ಟ್ವಿಟರ್ : @HinduJagrutiorg, @HJSKarnataka, ಫೇಸ್ಬುಕ್ : @JagoHinduBharat, @JagoHinduKarnataka, Instagram : @JagoHinduBharat. ಟ್ವಿಟರ್‌ ಹ್ಯಾಶ್ ಟ್ಯಾಗ್ #HarGharBhagwa ಎಂದು ಹ್ಯಾಶ್ ಟ್ಯಾಗ್​ಗಳನ್ನು ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.