ಹಿಂದೂ ವಿದ್ಯಾರ್ಥಿಗಳು ಸಹ ಪುನಃ ಕೇಸರಿ ಶಾಲು ಹೊದ್ದು ಕಾಲೇಜಿಗೆ ಬರಲಾರಂಭಿಸಿದರು!


Youth with kesari shawl in college premises

ತಮ್ಮ ಮಕ್ಕಳು ಶಾಲಾ ಕಾಲೇಜುಗಳಿಗೆ (School, Colleges) ಹೋಗಿ ಏನು ಮಾಡುತ್ತಿದ್ದಾರೆ ಅನ್ನೋದನ್ನು ಪಾಲಕರು ಗಮನಿಸಲೇಬೇಕಾದ ಸ್ಥಿತಿ ಬಂದೊದಗಿದೆ. ರಾಜ್ಯ ಉಚ್ಚ ನ್ಯಾಯಾಲಯದ (High Court) ಆದೇಶ ಹೊರತಾಗಿಯೂ ಅನೇಕ ಶಾಲೆ ಮತ್ತು ಕಾಲೇಜುಗಳಿಗೆ ಮುಸ್ಲಿಂ ಸಮುದಾಯದ (Muslim Community) ಕೆಲ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿಯೇ ಬರುತ್ತಿದ್ದಾರೆ. ಪ್ರತಿ ಕಾಲೇಜಿನ ಮುಂದೆ ಪ್ರಿನ್ಸಿಪಾಲ, ಅಧ್ಯಾಪಕರು ಮತ್ತು ಪೊಲೀಸ್ ಸಿಬ್ಬಂದಿ ದಿನಂಪ್ರತಿ ನಿಂತುಕೊಂಡು ಅವರನ್ನು ತಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ಹೋಗಿ ಅಂತ ಹೇಳಿದರೂ ವಿದ್ಯಾರ್ಥಿನಿಯರು ಕೇಳುತ್ತಿಲ್ಲ. ಈ ದೃಶ್ಯಗಳನ್ನು ಪ್ರತಿದಿನ ಮಾಧ್ಯಮಗಳಲ್ಲಿ ನೋಡುತ್ತಿರುವ ಮುಸ್ಲಿಮೇತರ ವಿದ್ಯಾರ್ಥಿಗಳ ಪೈಕಿ ಕೆಲವರಲ್ಲಿ ಕೇಸರಿ ಶಾಲು ಹೊದ್ದು ಕಾಲೇಜಿಗೆ ಹೋಗುವ ಹಟ ಹುಟ್ಟಿಕೊಂಡಿದೆ. ಇದೊಂದು ಬಗೆಯ ಚೈನ್ ರಿಯಾಕ್ಷನ್ ಥರ ಅನಿಸುತ್ತಿದೆ ಮಾರಾಯ್ರೇ. ಅವರನ್ನು ನೋಡಿ ಇವರು, ಒಂದು ಊರಲ್ಲಿ ನೋಡಿ ಮತ್ತೊಂದು ಊರಲ್ಲಿ! ಎಲ್ಲಿಗೆ ಬಂದು ನಿಲ್ಲುತ್ತೋ ಈ ಅವಾಂತರ?

ಚಿಕ್ಕೋಡಿಯಿಂದ ನಮಗೆ ಲಭ್ಯವಾಗಿರುವ ಈ ವಿಡಿಯೋ ನೋಡಿ. ಇಲ್ಲೊಂದು ಕಾಲೇಜಿದೆ, ಅದರ 4-5 ವಿದ್ಯಾರ್ಥಿಗಳು ಶುಕ್ರವಾರದಂದು ಕಾಲೇಜಿಗೆ ಬರುವಾಗ ಕೇಸರಿ ಶಾಲು ಹೊದ್ದು ಬಂದಿದ್ದಾರೆ. ಅವರಲ್ಲಿ 3-4 ಜನ ವಿದ್ಯಾರ್ಥಿಗಳ ಹಾಗೆ ಕಾಣುತ್ತಿಲ್ಲ. ಅವರ ಬೆನ್ನಿಗೆ ಬ್ಯಾಗ್ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಉತ್ತೇಜಿಸಲು ಅವರು ಬಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕಾಲೇಜಿನ ಶಿಕ್ಷಕ ವರ್ಗ ಕೇಸರಿ ಶಾಲು ಹೊದ್ದು ಬಂದಿರುವ ವಿದ್ಯಾರ್ಥಿಗಳನ್ನು ಗೇಟಿನ ಹೊರಗಡೆಯೇ ತಡೆದಿದ್ದಾರೆ. ಆದರೆ ಕಾಲೇಜಿನ ಮಹಡಿ ಮೇಲೆ ನಿಂತಿರುವ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬ ಶಾಲು ಧರಿಸಿದ್ದಾನೆ. ಕಾಲೇಜಿನೊಳಗೆ ಹೋಗುವಾಗ ಅವನು ಶಾಲನ್ನು ಪ್ರಾಯಶಃ ತನ್ನ ಬ್ಯಾಗಲ್ಲಿ ಇಲ್ಲವೇ ಜೇಬಲ್ಲಿ ಇಟ್ಟುಕೊಂಡಿರುತ್ತಾನೆ. ಆಮೇಲೆ ಕಾಲೇಜು ಮಹಡಿ ಹತ್ತಿ ಅದನ್ನು ಪ್ರದರ್ಶಿಸುತ್ತಿದ್ದಾನೆ. ಬೇರೆಯವರಿಂದ ಹೀರೋ ಅನಿಸಿಕೊಳ್ಳಬೇಕೆಂಬ ಉಮೇದಿ ಅವನಿಗೆ.

ಕೋಮು ಸೌಹಾರ್ದತೆಗೆ ಹೆಸರಾಗಿರುವ ಪ್ರದೇಶಗಳಲ್ಲೂ ವಿದ್ಯಾರ್ಥಿಗಳಲ್ಲಿ ಇಂಥ ಪ್ರವೃತ್ತಿ ಕಂಡುಬರುತ್ತಿರುವುದು ದಿಗಿಲು ಮೂಡಿಸುವ ವಿಷಯ.

TV9 Kannada


Leave a Reply

Your email address will not be published. Required fields are marked *