
ಮಂಗಳೂರಿನ ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾಗಿದೆ
ಮಳಲಿಯ ದರ್ಗಾ ಆಡಳಿತ ಮಂಡಳಿ ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ತಾಂತ್ರಿಕ ಕಾರಣ ನೀಡಿ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಕೋರಿ ಮಸೀದಿ ಆಡಳಿತ ಅರ್ಜಿ ನೀಡಿದೆ.
ಮಂಗಳೂರು: ಮಳಲಿಯ (Malali) ದರ್ಗಾದಲ್ಲಿ ದೇಗುಲದ (Temple) ಕುರುಹು ಪತ್ತೆಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳು ಮಸೀದಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸಿವೆ. ಈ ಬೆನ್ನಲ್ಲೆ ಮಳಲಿಯ ದರ್ಗಾ ಆಡಳಿತ ಮಂಡಳಿ ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ತಾಂತ್ರಿಕ ಕಾರಣ ನೀಡಿ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಕೋರಿ ಮಸೀದಿ ಆಡಳಿತ ಅರ್ಜಿ ನೀಡಿದೆ. ಅರ್ಜಿ ವಜಾ ಬಗ್ಗೆ ಮೇ 31ರಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಮಳಲಿಯ ದರ್ಗಾ ಪ್ರದೇಶ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಮನವಿ ಮಾಡಿದೆ.
ವಿವಾದ ಏನು?
ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾಗಿತ್ತು. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಗುಡಿಯೊಂದು ಪತ್ತೆಯಾಗಿತ್ತು. ನವೀಕರಣದ ವೇಳೆ ದರ್ಗಾ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಹಿಂದೂ ಸಂಘಟನೆಗಳು ಜಾಗ ಬಿಟ್ಟುಕೊಡುವಂತೆ ಆಗ್ರಹಿಸಿವೆ.