ಹಿಂದೂ, ಸಿಖ್​​ ನಾಗರೀಕರ ಮೇಲೆ ಉಗ್ರರ ದಾಳಿ; ಅಮಿತ್ ಶಾ ಮಹತ್ವದ ಸಭೆ, ದೋವಲ್​​​ ಭಾಗಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಲ್ಪ ಸಂಖ್ಯಾತರನ್ನು ಗುರುಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ರಕ್ಷಣಾ ಪಡೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಟಾರ್ಗೆಟ್​​​ ಕಿಲ್ಲಿಂಗ್ ಜಮ್ಮು ಕಾಶ್ಮೀರದಲ್ಲಿ ಹೆಚ್ಚಾಗುತ್ತಿದೆ, ಇದುವರೆಗೂ ನಾಗರೀಕರ ಮೇಲೆ 4ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ. ಕಳೆದ ಐದು ದಿನಗಳಲ್ಲಿ ಏಳು ಮಂದಿ ನಾಗರಿಕರನ್ನು ಉಗ್ರರು ಕೊಲೆಗೈದಿದ್ದಾರೆ. ಎಲ್ಲಾ ದಾಳಿಗಳಲ್ಲಿ ಹಿಂದೂ ಹಾಗೂ ಸಿಖ್​ ಸಮುದಾಯದ ಅಲ್ಪಸಂಖ್ಯಾತರನ್ನ ಟಾರ್ಗೆಟ್​ ಮಾಡಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಅಮಿತ್​ ಶಾ ಅವರು ಇಂದು ನಡೆಸಿದ ಸಭೆ ಮಹತ್ವದ ಪಡೆದುಕೊಂಡಿದ್ದು, ಸಭೆಯಲ್ಲಿ ರಕ್ಷಣಾ ಸಲಹೆಗಾರ ಅಜಿತ್ ದೋವಲ್​ ಕೂಡ ಭಾಗಿಯಾಗಿದ್ದಾರೆ.

ಇತ್ತ ಇಂದು ಶ್ರೀನಗರದಲ್ಲಿ ಉಗ್ರರು ನಡೆಸಿರುವ ದಾಳಿಯಲ್ಲಿ ಸಿಖ್​ ಸಮುದಾಯಕ್ಕೆ ಸೇರಿದ ಶಾಲಾ ಪ್ರಾಂಶುಪಾಲೆ ಹಾಗೂ ಹಿಂದೂ ಸಮುದಾಯದ ಶಿಕ್ಷಕ ಸಾವನ್ನಪ್ಪಿ, ಮತ್ತಿಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಶಾಲೆ ತರಗತಿಗಳು ಆನ್​​ಲೈನ್​​​ನಲ್ಲಿ ನಡೆಯುತ್ತಿದ್ದ ಕಾರಣ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಮಕ್ಕಳು ಶಾಲೆಯಲ್ಲಿ ಇರಲಿಲ್ಲ. ದಾಳಿಯ ಹೊಣೆಯನ್ನು ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್​ಎಫ್​​) ಉಗ್ರ ಸಂಘಟನೆ ನಡೆಸಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸ್​​ ಎಸ್​ಪಿ ತಿಳಿಸಿದ್ದಾರೆ. ಟಿಆರ್​ಎಫ್​​ ಉಗ್ರ ಸಂಘಟನೆಯನ್ನು ಪಾಕಿಸ್ತಾನ ಕರಾಚಿಯಿಂದ ನಿಯಂತ್ರಣ ಮಾಡಲಾಗುತ್ತಿದ್ದು, ನಿನ್ನೆಯ ಘಟನೆಯಲ್ಲಿ ಸಾವನ್ನಪ್ಪಿದ್ದ ಬಿಂದ್ರೂ ಆರ್​ಎಸ್​ಎಸ್ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದರು ಎಂಬ ದುರುದ್ದೇಶದಿಂದ ಉಗ್ರರು ಕೊಲೆಗೈದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *