ಹಿಜಾಬ್​​​​​​​ ವಿಚಾರಕ್ಕೆ ಯಾರು ತಲೆಹಾಕಬೇಡಿ.. ಕಾಂಗ್ರೆಸ್​ ನಾಯಕರಿಗೆ DSK ಸೂಚನೆ


ಬೆಂಗಳೂರು: ಹಿಜಾಬ್​ ವಿಚಾರದಲ್ಲಿ ಮೌನವಹಿಸಿ, ಯಾವುದೇ ಕಾರಣಕ್ಕೂ ಮಾತನಾಡಬೇಡಿ ಎಂದು ಡಿ.ಕೆ.ಶಿವಕುಮಾರ್​ ಕಾಂಗ್ರೆಸ್​ ನಾಯಕರಿಗೆ ಸೂಚನೆ ನೀಡಿದ್ದಾರಂತೆ. ಹಿಜಾಬ್​ ವಿಷಯವಾಗಿ ರಾಜ್ಯಾದ್ಯಂತ ವಿವಾದವಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ನಡುವೆ ಕಾಂಗ್ರೆಸ್​ ನಾಯಕರಿಗೆ ಮಾತಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿರೋದರ ಬಗ್ಗೆ ರಾಜಕೀಯ ಪಾಳೆಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.​

ಡಿಕೆಎಸ್​ ಸೂಚನೆ ಹಿಂದಿರೋ ಕಾರಣಗಳೇನು

ಕಾರಣ 1: ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುವುದೇ ರಾಜಕೀಯವಾಗಿ ಲಾಭದಾಯಕ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಡಿ.ಕೆ ಶಿವಕುಮಾರ್
ಕಾರಣ 2: ಬಿಜೆಪಿ ಹಿಂದುಗಳ ಮತ ಕ್ರೂಡಿಕರಿಸಲು ಇಂಥಹ ವಿಷಯಗಳನ್ನ ದೊಡ್ಡದಾಗಿ ಮಾಡುತ್ತಿದೆ, ಹೇಗಿದ್ದರೂ ಅಲ್ಪಸಂಖ್ಯಾತರು ನಮ್ಮ ಸಾಂಪ್ರದಾಯಿಕ ಮತದಾರರು, ಆ ಮತಗಳು ಎಲ್ಲೂ ಹೋಗುವುದಿಲ್ಲ, ಆದರೆ ಹಿಜಾಬ್ ಪರ ನಿಂತರೇ ನಮ್ಮ ಪರವಾಗಿರುವ ಹಿಂದು ಮತಗಳು ಚದುರಲಿದೆ ಎಂಬುದು ಡಿಕೆ ಲೆಕ್ಕ
ಕಾರಣ 3: ಚುನಾವಣೆಯ ವರ್ಷದಲ್ಲಿ “ಧರ್ಮ ರಾಜಕಾರಣ” ದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂಬ ನಿಲುವು ತಾಳಿರುವ ಡಿಕೆಶಿ
ಕಾರಣ 4: ಚುನಾವಣೆ ಸಂದರ್ಭದಲ್ಲಿ ಮತ ಗಳಿಕೆಯ ದೃಷ್ಟಿಯಿಂದ ಕಾಂಗ್ರೆಸ್ ಸಾಫ್ಟ್ ಹಿಂದುತ್ವ ಪಾಲಿಸಬೇಕು ಎಂಬ ಧೋರಣೆ ಹೊಂದಿರುವ ಡಿಕೆಶಿ
ಕಾರಣ 5: ಹಿಜಾಬ್ ಪರ ಮಾತಾಡಿದರೆ ಕಾಂಗ್ರೆಸ್ ಮತ್ತೊಮ್ಮೆ ಮುಸ್ಲಿಂಮರ ಒಲೈಕೆ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಿಲ್ಲ
ಕಾರಣ 6: ಅಲ್ಲದೇ ಹಿಜಾಬ್ ವಿಚಾರ ಕೇವಲ ಉಡುಪಿ ಸೇರಿದಂತೆ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ, ಮಲೆನಾಡಿನಲ್ಲೂ ಸದ್ದು ಮಾಡುತ್ತಿದೆ ರಾಜ್ಯಾದ್ಯಾಂತ ಇದರ ಎಫೆಕ್ಟ್ಅನ್ನು ಪಕ್ಷ ಎದುರಿಸಬೇಕಾಗುತ್ತದೆ.
ಕಾರಣ 7: ದೊಡ್ಡ ಸಂಖ್ಯೆಯಲ್ಲಿ ಹಿಂದು ಯುವಕರ, ಯುವತಿಯರ ಮತಗಳು ಕಾಂಗ್ರೆಸ್ ನಿಂದ ದೂರವಾಗಲಿವೆ ಎಂಬ ಮತ ಲೆಕ್ಕ ಹಾಕಿರುವ ಕೆಪಿಸಿಸಿ ಅಧ್ಯಕ್ಷ
ಕಾರಣ 8: ಹಿಜಾಬ್ ವಿವಾದ ಈಗ ಬೆಂಗಳೂರಿಗೂ ಕಾಲಿಟ್ಟಿರುವುದರಿಂದ ಬಿಬಿಎಂಪಿ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂಬ “ರಾಜ” ಕಾರಣ
ಕಾರಣ 9: ಈಗಾಗಲೇ ಹಿಜಾಬ್ ವಿವಾದ ದೇಶ ವಿದೇಶಗಳಲ್ಲಿ ಚರ್ಚೆಯ ವಸ್ತು ವಿಷಯ ಆಗಿರುವುದರಿಂದ ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬಹುದು
ಕಾರಣ 10: ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಉಳಿದೆಲ್ಲ ವಿಚಾರ ಬದಿಗೆ ಸರಿದು ಹಿಂದುತ್ವದ ಅಜೆಂಡಾ ಮುಂದೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವೇ ಹೆಚ್ಚು ಎಂಬ ದೂರಾಲೋಚನೆ ಕೂಡ ಈ “ರಾಜ” ಕಾರಣಗಳಲ್ಲಿ ಒಂದು.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

The post ಹಿಜಾಬ್​​​​​​​ ವಿಚಾರಕ್ಕೆ ಯಾರು ತಲೆಹಾಕಬೇಡಿ.. ಕಾಂಗ್ರೆಸ್​ ನಾಯಕರಿಗೆ DSK ಸೂಚನೆ appeared first on News First Kannada.

News First Live Kannada


Leave a Reply

Your email address will not be published.