ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಿ ಇಲ್ಲವೇ ವಿಷ ಕೊಡಿ ಅನ್ನುತ್ತಾರೆ ಹಾಸನದ ಕಾಲೇಜೊಂದರ ವಿದ್ಯಾರ್ಥಿನಿಯರು | Allow us to wear hijab or give us poison we will consume it say students at a college in Hassan ARB


ಹಾಸನದಲ್ಲೂ (Hassan) ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಮತ್ತು ಆಡಳಿತ ಮಂಡಳಿಗಳೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ವಿವಾದ ನಿಜಕ್ಕೂ ಅತಿರೇಕಕ್ಕೆ ಹೋಗುತ್ತಿದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವಿಷಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಕಳೆದ ಹತ್ತು ದಿನಗಳಿಂದ ಹೈಕೋರ್ಟ್ನಲ್ಲಿ (High Court) ವಿಚಾರಣೆ ನಡೆಯುತ್ತಿದೆ. ಎಲ್ಲ ವಾದವಿವಾದಗಳನ್ನು ಕೋರ್ಟಿನ ವಿಸ್ತೃತ ಪೀಠ (larger bench) ವಿಚಾರಣೆ ನಡೆಸುತ್ತಿದೆ. ಈ ವಿದ್ಯಾರ್ಥಿನಿಯರು ತೀರ್ಪು ತಮ್ಮ ವಿರುದ್ಧವೇ ಬರುತ್ತದೆ ಅಂತ ಯಾಕೆ ಅಂದುಕೊಳ್ಳುತ್ತಿದ್ದಾರೋ ಅಂತ ಅರ್ಥವಾಗದು. ಕೋರ್ಟ್ ಹೇಳಿರುವುದೇನು? ಅಂತಿಮ ತೀರ್ಪು ನೀಡುವವರೆಗೆ ಮಕ್ಕಳಿಗೆ ಧಾರ್ಮಿಕತೆ ಬಿಂಬಿಸುವ ವಸ್ತ್ರಗಳನ್ನು ಧರಿಸಿ ಶಾಲಾ ಕಾಲೇಜುಗಳಿಗೆ ಬರುವ ಅವಕಾಶ ನೀಡಬೇಡಿ ಅಂತ ಮಧ್ಯಂತರ ಆದೇಶದಲ್ಲಿ ಹೇಳಿದೆ. ನ್ಯಾಯಾಲಯ ಹೇಳಿದಂತೆ ವಿದ್ಯಾರ್ಥಿನಿಯರು ಯಾಕೆ ಕೇಳುತ್ತಿಲ್ಲ? ಅಲ್ಲದೆ ಅವರಿಗೆ ತರಗತಿಗಳಲ್ಲಿ ಮಾತ್ರ ಹಿಜಾಬ್ ಧರಿಸಬೇಡಿ ಅಂತ ಹೇಳಲಾಗಿದೆ. ಮನೆಯಿಂದ ಶಾಲಾ ಆವರಣ ತಲುಪುವವರೆಗೆ ಅವರು ಬುರ್ಖಾ, ಹಿಜಾಬ್ ಧರಿಸಿ ಬರಬಹುದು. ಪೋಷಕರು ಸಹ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ.

ಹಾಸನದ ಸರ್ಕಾರೀ ಮಹಿಳಾ ಪ್ರಥಮ ದರ್ಜೆ ಕಾಲೇಜೊಂದರ ಮುಂದೆ ವಿದ್ಯಾರ್ಥಿನಿಯರು ಮಾಡುತ್ತಿರುವ ವಾದ ಕೇಳಿಸಿಕೊಳ್ಳಿ. ನಮಗೆ ವಿಷ ಕೊಡಿ ಅದನ್ನು ಕುಡಿದು ಸತ್ತು ಹೋಗುತ್ತೇವೆ, ಪಾಠಗಳೆಲ್ಲ ಮಿಸ್ ಆಗುತ್ತಿವೆ, ನಮ್ಮ ಭವಿಷ್ಯ ಹಾಳಾಗುತ್ತಿದೆ ಎಂದು ಅವರು ಕಾಲೇಜಿನ ಆಡಳಿತ ಮಂಡಳಿಗೆ ಹೇಳುತ್ತಿದ್ದಾರೆ.

ಇದು ಮಹಿಳಾ ಕಾಲೇಜು ಅದರೂ ಅವರು ಹಿಜಾಬ್ ತೆಗೆದಿಟ್ಟು ಪಾಠಗಳನ್ನು ಕೇಳಿಸಿಕೊಳ್ಳಲು ತಯಾರಿಲ್ಲ. ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಅಂತ ಅವರು ಪಟ್ಟು ಹಿಡಿದಿದ್ದಾರೆ.

TV9 Kannada


Leave a Reply

Your email address will not be published. Required fields are marked *