ಹಿಜಾಬ್ ಬಗ್ಗೆ ಕೋರ್ಟ್ ಆದೇಶ ಮಕ್ಕಳಿಗೆ ಅರ್ಥವಾಗುವುದಿಲ್ಲ, ಶಿಕ್ಷಕರು ಅದನ್ನು ವಿವರಿಸಬೇಕು ಎನ್ನುತ್ತಾರೆ ಮೈಸೂರು ಡಿಡಿಪಿಐ | Mysuru DDPI says kids are too young to understand HC’s directive on hijab, teachers should explain it to them ARB


ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ (dutifully) ಮಾಡಿದರೆ ಸಾರ್ವಜನಿಕರ ಎಷ್ಟೋ ಸಮಸ್ಯೆಗಳು ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತವೆ. ಇದಕ್ಕೊಂದು ಜ್ವಲಂತ ನಿದರ್ಶನವಾಗಿ ಕಾಣುತ್ತಾರೆ ಮೈಸೂರು ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕ (Deputy Director for Public Instruction) ರಾಮಚಂದ್ರ ರಾಜೇ ಅರಸ್ (Ramachandra Raje Urs). ಹಿಜಾಬ್ ಮಕ್ಕಳಲ್ಲಿ ಮೂಡಿರುವ ಗೊಂದಲವನ್ನು ದೂರ ಮಾಡಲು ಅವರು ಹಲವಾರು ಶಾಲೆಗಳಿಗೆ ಖುದ್ದು ಭೇಟಿ ನೀಡಿ ಅಲ್ಪ ಸಮುದಾಯದ ಮಕ್ಕಳೊಂದಿಗೆ ಮಾತಾಡಿ ಶಾಲೆಯ ಆವರಣದಲ್ಲಿ ಯಾಕೆ ಹಿಜಾಬ್ ಧರಿಸಬಾರದು, ಹೈಕೋರ್ಟ್ ಆದೇಶ ಏನು ಹೇಳುತ್ತದೆ ಮೊದಲಾದ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತಿದ್ದಾರೆ. ಮೈಸೂರಿನ ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಮನೆಯಿಂದ ಹಿಜಾಬ್ ಧರಿಸಿ ಹೊರಟರೂ ಶಾಲಾ ಆವರಣ ಪ್ರವೇಶಿಸುತ್ತಿದಂತೆ ಅದನ್ನು ತೆಗೆದು ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡು ತರಗತಿಗಳಿಗೆ ಹೋಗುತ್ತಿದ್ದಾರೆ. ಕೆಲ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿನಿಯರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂಥ ವಿದ್ಯಾರ್ಥಿನಿಯರೊಂದಿಗೆ ಅರಸ್ ಮಾತಾಡಿ ಅವರಿಗೆ ತಿಳಿಹೇಳುತ್ತಿದ್ದಾರೆ.

ಮಕ್ಕಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಸಹ ಶಾಲೆಗಳ ಮುಖ್ಯೋಪಾಧ್ಯಯರಿಗೆ ಅವರು ಹೇಳುತ್ತಿದ್ದಾರೆ. ಅರಸ್ ಮೈಸೂರಿನ ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಅವರು ಮಾತಾಡುತ್ತಿರುವುದು ಈ ವಿಡಿಯೋನಲ್ಲಿ ಕಾಣುತ್ತದೆ. ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಮಾತಾಡಿ ಕ್ಲಾಸ್ ರೂಮಿಂದ ಹೊರಬಂದ ನಂತರ ಅವರು ಶಿಕ್ಷಕರೊಂದಿಗೂ ಮಾತಾಡುತ್ತಾರೆ.

ಈ ಶಾಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿ ತೆರಳಿದ್ದಾರೆ. ಅವರೊಂದಿಗೆ ಒಂದು ಪ್ರತ್ಯೇಕವಾದ ಕೋಣೆಗೆ ಕರೆಸಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಕೋರ್ಟಿನ ಆದೇಶ ವಿವರಿಸಿ ಎಂದು ಹೇಳುತ್ತಾರೆ. ಮಕ್ಕಳಿಗೆ ಕೋರ್ಟ್ ಅದೇಶ ಬಹಳ ದೊಡ್ಡ ವಿಷಯವೆನಿಸುತ್ತದೆ, ಅದನ್ನು ಅವರಿಗೆ ಅರ್ಥಮಾಡಿಸುವ ಕೆಲಸ ಶಿಕ್ಷಕರಿಂದ ಆಗಬೇಕು ಅಂತ ಅವರು ಹೇಳುತ್ತಾರೆ.

ಇದನ್ನೂಓದಿ:   ಸಮವಸ್ತ್ರ ಜಾರಿ ಅಧಿಕಾರವನ್ನು ಕಾಲೇಜು ಅಭಿವೃದ್ದಿ ಸಮಿತಿಗೆ ನೀಡಲು ಸಾಧ್ಯವಿಲ್ಲ; ಹಿಜಾಬ್ ವಿಚಾರಣೆ ಮುಂದೂಡಿದ ಹೈಕೋರ್ಟ್

TV9 Kannada


Leave a Reply

Your email address will not be published. Required fields are marked *