ಹಿಟ್ಲರ್​ನ ಅರ್ಧಾಂಗಿನಿ ಲೀಲಾ ಈಗ ಸ್ಮಾಲ್​ ಸ್ಕ್ರೀನ್​ನ ಟಾಪ್​ ನಟಿ


ಈಗ ಎಲ್ಲಿ ನೋಡಿದ್ರು ಲೀಲಾ..ಲೀಲಾ..ಅನ್ನೋ ಮಾತೇ..ಲೀಲಾಳ ಲೀಲಾವಳಿಗಳು ಜನರ ಮನಸ್ಸು ಗೆದ್ದಿವೆ. ಪಟ್​ ಪಟ್​ ಅಂತಾ ಪಾಟಾಕಿ ತರಹ ಮಾತ್ನಾಡೋ ನಮ್ಮ ಹಿಟ್ಲರ್​ನ ಅರ್ಧಾಂಗಿನಿ ಲೀಲಾ ಈಗ ಸ್ಮಾಲ್​ ಸ್ಕ್ರೀನ್​ನ ಟಾಪ್​ ಲಿಸ್ಟ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಹೌದು, ಬೆಟ್ಟದಷ್ಟು ಆಸೆ, ಕನಸುಗಳನ್ನ ಕಟ್ಟಿಕೊಂಡು ಅದೆಷ್ಟೋ ಕಲಾವಿದರು ಕಲಾ ರಂಗಕ್ಕೆ ಪ್ರವೇಶ ಮಾಡ್ತಾರೆ. ಆದ್ರೇ ಪ್ರತಿಭೆ ಜೊತೆಗೆ ಅದೃಷ್ಟ ದೇವತೆಯ ಕೃಪಾ ಕಟಾಕ್ಷ ಕೂಡ ತುಂಬಾ ಮುಖ್ಯವಾಗಿದ್ದು, ಈ ಎರಡರ ಆಶೀರ್ವಾದ ಪಡೆದವರೂ ನಿಜಕ್ಕೂ ದೊಡ್ಡ ಭಾಗ್ಯವಂತರು. ಇಂತಹ ಕಲಾವಿದರ ಪಟ್ಟಿಗೆ ಈಗ ಕಿರುತೆರೆಯ ಉದಯೋನ್ಮಖ ನಟಿ ಮಲೈಕಾ ಟಿ ವಸುಪಾಲ್​ ಸೇರ್ಪಡೆಯಾಗಿದ್ದಾರೆ.

 

ಯೆಸ್​, ನಾವು ನಿಮಗೆ ಹೇಳ್ತಾಯಿರುವ ಆ ಪ್ರತಿಭೆ ಹಿಟ್ಲರ್​ ಕಲ್ಯಾಣದ ಯಡವಟ್ಟು ರಾಣಿ ಲೀಲಾ ಅಲಿಯಾಸ್​ ಮಲೈಕಾ. ಮುದ್ದಾಗಿರುವ ಮಲೈಕಾ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಿಟ್ಲರ್​ ಕಲ್ಯಾಣ ಸೀರಿಯಲ್​ ದೊಡ್ಡ ಮಟ್ಟದ ಹಿಟ್​ ನೀಡಿದೆ. ಅವರ ಕಲಾ ಬದುಕಿನ ಮೊದಲ ಸೀರಿಯಲ್​ನಲ್ಲಿಯೇ ಸಿಕ್ಸರ್​ ಬಾರಿಸಿದ್ದಾರೆ ನಟಿ.

ಹಿಟ್ಲರ್​ ಕಲ್ಯಾಣ ಸೀರಿಯಲ್​ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಅತೀ ಕಡಿಮೆ ಸಮಯದಲ್ಲಿ ಕನ್ನಡ ಕಿರುತೆರೆಯ ನಂಬರ್​ ಒನ್​ ಸ್ಥಾನ ಅಲಂಕರಿಸಿದೆ. ಇದಕ್ಕೆ ಮುಖ್ಯ ಕಾರಣ ನಾಯಕ ದಿಲೀಪ್​ರಾಜ್​ ಹಾಗೂ ನಾಯಕಿ ಮಲೈಕಾ ಅವರ ಅಭಿನಯ. ವಯಸ್ಸಿನ ಅಂತರವಿದ್ರೂ ಇವರಿಬ್ಬರ ಕೆಮೆಸ್ಟ್ರಿ ಸಖತ್​ ವರ್ಕ್​ ಆಗಿದ್ದು, ಬಂದ ಸ್ವಲ್ಪ ದಿನದಲ್ಲಿಯೇ ದೊಡ್ಡ ಮಟ್ಟದ ಅಭಿಮಾನಿ ವರ್ಗವನ್ನ ಗಳಿಸಿದೆ ಈ ಜೋಡಿ.

 

ಅಂದ್ಹಾಗೆ, ಮಲೈಕಾ ಅವರು ಮೂಲತಃ ದಾವಣಗೆರೆಯ ಕುವರಿ. ಹುಟ್ಟಿ ಬೆಳದಿದ್ದೇಲ್ಲ ಅಲ್ಲಿಯೇ. ಓದಿದ್ದು ಸಿವಿಲ್​ ಎಂಜನಿಯರಿಂಗ್​ ಆದ್ರೇ ಆಯ್ಕೆ ಮಾಡಿಕೊಂಡಿದ್ದು ಕಲಾ ಬದುಕು.

ಬ್ಯೂಟಿ ವಿತ್​ ಬ್ರೇನ್​ ಎನ್ನುವಂತೆ ಚಲುವಿನ ಜೊತೆಗೆ ಪ್ರತಿಭೆ ಹೊಂದಿರುವ ಮಲೈಕಾ ಅವರು ಸದ್ಯ ಕಿರುತೆರೆಯ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದು, ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆ ನಡೆದ ಜ್ಹೀ ಕುಟುಂಬ ಅವರ್ಡ್ಸ್​ನಲ್ಲಿ ಪ್ರಾಮಿಸಿಂಗ್​ ಫೇಸ್​ ಆಫ್​ ದಿ ಇಯರ್​ ಅವರ್ಡ್​ನ್ನ ಮಲೈಕಾ ಗಿಟ್ಟಿಸಿಕೊಂಡಿದ್ದಾರೆ.

 

ಒಟ್ನಲ್ಲಿ ಕನ್ನಡ ಕಿರುತೆರೆಗೆ ಹೊಸ ಪ್ರತಿಭಾನ್ವಿತ ನಟಿ ಸಿಕ್ಕಿದ್ದು, ಮಲೈಕಾ ಅವರ ಪರಿಶ್ರಮ, ಸತತ ಪ್ರಯತ್ನವೇ ಅವರು ಇಷ್ಟು ಕಮ್ಮಿ ಸಮಯದಲ್ಲಿ ಜನರ ಪ್ರೀತಿಗೆ ಪಾತ್ರರಾಗಲು ಕಾರಣ ಅಂದ್ರೇ ತಪ್ಪಾಗಲಾರದು.

 

News First Live Kannada


Leave a Reply

Your email address will not be published. Required fields are marked *