ಹಿಟ್ಲರ್ ಕಲ್ಯಾಣ.ಕಿರುತೆರೆಯ ನಂಬರ್ ಒನ್ ಸ್ಥಾನದಲ್ಲಿರುವ ಸೀರಿಯಲ್. ಹಿಟ್ಲರ್ನ ವೇಗ, ಗುಣಮಟ್ಟ, ಡೈಲಾಗ್ಸ್ ಎಲ್ಲವೂ ಜನರಿಗೆ ಸಖತ್ ಇಷ್ಟ ಆಗಿದ್ದು, ಶುರುವಿನಿಂದಲ್ಲೂ ತನ್ನ ಹವಾ ಕಾಪಾಡಿಕೊಂಡು ಬಂದಿದೆ. ಹಿಟ್ಲರ್ನ ಕಲ್ಯಾಣದಲ್ಲಿ ನೂರೆಂಟು ವಿಘ್ನಗಳು ಎದುರಾಗಿ ಅಂತೂ ಇಂತೂ ಲೀಲಾಳೇ ಎಜೆ ಬಾಳಸಂಗಾತಿಯಾಗಿ ಬಂದಿದ್ದಾಳೆ.
ಇತ್ತೀಚಿನ ಧಾರಾವಾಹಿಗಳಲ್ಲಿ ತುಂಬಾ ಬೇಗ ಯಶಸ್ಸಿನ ಉತ್ತುಂಗುಕ್ಕೆ ಏರಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಟ್ಲರ್ ಕಲ್ಯಾಣ ಕತೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳು ಸಿಗುತ್ತಿದ್ದು, ಯಡವಟ್ಟು ಲೀಲಾಳ ಕೆಲಸಗಳಿಗೆ ಎಜೆ ಬೇಸತ್ತು ಹೋಗಿದ್ದಾನೆ. ಅತ್ತ ಅಮ್ಮನ ಬ್ಲ್ಯಾಕ್ಮೇಲ್ ಒಂದುಕಡೆಯಾದ್ರೇ ಲೀಲಾಳ ಲೀಲಾವಳಿಗಳು ಇನ್ನೊಂದು ಕಡೆ. ಈ ಎರಡರ ನಡುವೇ ಸಿಕ್ಕಿದ್ದಾನೆ ಪರ್ಫೇಕ್ಶನಿಸ್ಟ್ ಎಜೆ.
ಈ ಜೋಡಿ ಒಂದಾಗೊಕೆ ಮುಖ್ಯ ಕಾರಣಾನೇ ದೇವ್.
ಈ ದೇವ್ನ ಎಂಟ್ರಿಯಿಂದ ಲೀಲಾ-ಎಜೆಯ ಬದುಕಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿತ್ತು. ತಂಗಿಯನ್ನ ದೇವ್ನಿಂದ ಕಾಪಡಲು ಲೀಲಾ ಇಷ್ಟವಿಲ್ಲದಿದ್ದರೂ ಮೋಸದಿಂದ ಎಜೆ ಜೊತೆ ಸಪ್ತಪದಿ ತುಳಿಯುತ್ತಾಳೆ. ಇಲ್ಲಿ ಮೋಸ ಅನ್ನೋ ಶಬ್ಧ ಬಳಸೋಕೆ ಕಾರಣ ಇದೆ. ಯಾಕಂದ್ರೇ ಮೊದಲು ಅಂತರಾಳ ಆಸೆಯಂತೆ ಎಜೆ ಲೀಲಾಳನ್ನ ಮದುವೆಯಾಗಬೇಕು ಅಂತಾ ಸಾಕಷ್ಟು ಪ್ರಯತ್ನ ಪಟ್ಟರು. ನಮ್ಮ ಲೀಲಾ ಎಜೆ ಪ್ರಯತ್ನಕ್ಕೆ ತನ್ನೀರು ಎರಚಿ ತನ್ನ ನಟನಾ ಕನಸಿಗೆ ರೆಕ್ಕೆ ಕಟ್ಟಿ ಹಾರಲು ಪ್ರಯತ್ನಿಸುತ್ತಾಳೆ.
ಇದನ್ನೂ ಓದಿ:ಕಿರುತೆರೆಯಲ್ಲಿ ಹಿಟ್ಲರ್ನ ಮಿಂಚಿನ ಓಟ.. ಹಿಟ್ಲರ್ ಕಲ್ಯಾಣಕ್ಕೆ ಅವಾರ್ಡ್ಗಳ ಸುರಿಮಳೆ..
ಆದ್ರೇ ಅವಳ ಹಾರಾಟಕ್ಕೆ ಹೊಸ ಆಯಾಮ ನೀಡಿದ ದೇವ್. ಹಿಟ್ಲರನ ಜೊತೆ ಕಲ್ಯಾಣವಾಗುಂತೆ ಮಾಡುತ್ತಾನೆ. ಸದ್ಯ ತಾನು ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪ ಪಡುತ್ತಿರುವ ಲೀಲಾ..ಎಜೆಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ನಾನಾ ಸಾಹಸ ಮಾಡುತ್ತಿದ್ದಾಳೆ.
ಈ ಸೀರಿಯಲ್ನಲ್ಲೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಸದ್ಯ ಎಜೆ-ಲೀಲಾಳ ರಿಶಪ್ಶನ್ ನಡೆಯುತ್ತಿದ್ದು, ಹೊರ ಪ್ರಪಂಚದ ಬಾಯಿ ಮುಚ್ಚಿಸಲು ಮಾಡುತ್ತಿರುವ ಈ ನಾಟಕದಲ್ಲಿ ಲೀಲಾ ದೊಡ್ಡ ಬಾಂಬ್ ಒಂದನ್ನ ಸಿಡಿಸಿದ್ದಾಳೆ. ಮಿಡಿಯಾ…ಜನರ ಮುಂದೆ ನಾನು ಇಷ್ಟವಿಲ್ಲದೇ ಈ ಮದುವೆಯಾದೆ. ಇದ್ರಲ್ಲಿ ಶ್ವೇತಾಳದ್ದಾಗಲಿ, ಎಜೆ ಕುಟುಂಬದ್ದಾಗಲೇ ತಪ್ಪಿಲ್ಲ. ಎಲ್ಲಾ ನನ್ನ ತಪ್ಪು ಎಂದು ಒಪ್ಪಿಕೊಂಡಿದ್ದಾಳೆ. ಇನ್ನೊಂದು ವಿಶೇಷ ಅಂದ್ರೇ ಇವಳ ಪ್ರಾಮಾಣಿಕತೆಗೆ ಮನಸೋತಿರುವ ಎಜೆ…ಲೀಲಾಳ ಪರವಾಗಿ ಬ್ಯಾಟಿಂಗ್ ಮಾಡಿದ್ದಾನೆ. ಅಷ್ಟೇಯಲ್ಲ we are ಮೇಡ್ ಫಾರ್ ಈಚ್ ಅದರ್ ಅಂತಾ ಹೇಳಿ ಲೀಲಾಗೆ ಶಾಕ್ ನೀಡಿದ್ದಾನೆ.
ಇದನ್ನೂ ಓದಿ:ಗ್ರ್ಯಾಂಡ್ ಫಿನಾಲೆ ತಲುಪಿದ 6 ಜೋಡಿಗಳು; ನಿಮ್ಮ ಪ್ರಕಾರ ರಾಜಾ-ರಾಣಿ ಯಾರು ವಿನ್ ಆಗಬೇಕು..?
ಒಟ್ನಲ್ಲಿ ಸಾಕಷ್ಟು ತಿರುವುಗಳ ಮೂಲಕ ಮುನ್ನುಗ್ಗುತ್ತಿರುವ ಹಿಟ್ಲರ್… ಸೀನ್ಸ್ಗಳನ್ನ ಎಳಿಯದೇ ವೇಗವಾಗಿ ಜನರ ಮನೆ ತಲುಪುತ್ತಿದ್ದು, ವೀಕ್ಷಕರನ್ನ ಹಿಡಿದಿಟ್ಟುಕೊಂಡಿದ್ದಾನೆ. ಹೀಗಾಗಿ ಲೀಲಾಳ ಬದುಕಿನಲ್ಲಿ ಮುಂದೇನಾಗುತ್ತೇ ಅನ್ನೋ ಕುತೂಹಲವಂತೂ ಮನೆ ಮಾಡಿದೆ.