ಈಗ ಎಲ್ಲಿ ನೋಡಿದ್ರೂ ಹಿಟ್ಲರ್ ಕಲ್ಯಾಣದ್ದೇ ಸದ್ದು. ಪ್ರೇಕ್ಷಕರ ಮನೆ ಪ್ರವೇಶಿಸಿದ ಕೆಲವೇ ತಿಂಗಳಲ್ಲಿ ಅವರ ಪ್ರೀತಿ ಹಾರೈಕೆಗೆ ಪಾತ್ರನಾಗಿದ್ದಾನೆ ಹಿಟ್ಲರ್. ದಿನೇ ದಿನೇ ಕತೆ ಸಖತ್ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದ್ದು, ಲೀಲಾ-ಎಜೆ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳ ಸುರಿಮಳೆಯಾಗುತ್ತಿದೆ.
ಸದ್ಯ ಹಿಟ್ಲರ್ ಕಲ್ಯಾಣ ತಂಡ ಮತ್ತೊಂದು ಹೊಸ ಸುದ್ದಿ ನೀಡಿದ್ದು, ಎಜೆ ಎದುರಾಳಿಯಾಗಿ ಖಡಕ್ ವಿಲನ್ ಒಬ್ಬರು ಸೀರಿಯಲ್ಗೆ ಎಂಟ್ರಿ ಕೊಡುತ್ತಿದ್ದಾರೆ. ಇಷ್ಟು ದಿನ ಎಜೆಯ ಪ್ರತಿ ಹೆಜ್ಜೆಗೂ ಮುಳ್ಳಾಗಿ ನಿಂತಿದ್ದ ದೇವ್. ಇವನನ್ನೇ ಮೀರಿಸುವಂತಹ ಮತ್ತೊಂದು ಪಾತ್ರ ಬರುತ್ತಿದ್ದು, ಆ ಪಾತ್ರವನ್ನ ಬ್ರಹ್ಮಗಂಟು ಖ್ಯಾತಿಯ ನಟ ದತ್ತು ಅಲಿಯಾಸ್ ಹರ್ಷ ಅವರು ನಿರ್ವಹಿಸಲಿದ್ದಾರೆ.
ಬ್ರಹ್ಮಗಂಟು ಸೀರಿಯಲ್ನಲ್ಲಿ ಪಾಸಿಟಿವ್ ಪಾತ್ರದ ಮೂಲಕ ಮನೆಮಾತಾಗಿದ್ದ ಹರ್ಷ ಅವರು ಹಿಟ್ಲರ್ನ ಸಾಮ್ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಸದ್ಯ ಹಿಟ್ಲರ್ ಕಲ್ಯಾಣದಲ್ಲಿ ಲೀಲಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾಳೆ. ತನ್ನನ್ನ ಮದುವೆಯಾಗಲೂ ಎಜೆಯೇ ತನ್ನ ತಂಗಿಯನ್ನ ಕಿಡ್ನಾಪ್ ಮಾಡಿಸಿ, ಹೆದರಿಸಿ ನನ್ನ ಮದುವೆಯಾಗಿದ್ದಾನೆ ಎಂದು ಲೀಲಾ ರಂಪಾಟ ಮಾಡಿಕೊಂಡು. ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದಾಳೆ. ಈ ನಡುವೆ ಲೀಲಾಳನ್ನ ಅಪಹರಿಸಲಾಗಿದೆ.
ಹೀಗೇ ಸಾಗುತ್ತಿರುವ ಕತೆಯಲ್ಲಿ ಇನ್ನೇನೂ ಹರ್ಷವರು ಎಂಟ್ರಿ ಕೊಡುತ್ತಿದ್ದು, ಹಿಟ್ಲರ್-ಲೀಲಾಳ ಬದುಕಿನಲ್ಲಿ ಇನ್ಯಾವ ರಹಸ್ಯಗಳು ತೆರೆದುಕೊಳ್ಳಲಿವೇ ಎಂಬುದನ್ನ ಕಾದು ನೋಡಬೇಕು.