ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​​​ಗೆ ಸಜ್ಜಾಗ್ತಿರುವ ರೋಹಿತ್ ಶರ್ಮಾ​​ಗೆ, ವಿರೇಂದ್ರ ಸೆಹ್ವಾಗ್ ಕೆಲವು ಟಿಪ್ಸ್​​​ಗಳನ್ನ ನೀಡಿದ್ದಾರೆ.

ಇಂಗ್ಲೆಂಡ್​ ಪಿಚ್​​ಗಳಲ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಬಾರದು. ಏಕೆಂದರೆ ಸ್ವಿಂಗ್​ ಕಂಡೀಷನ್​​ನಲ್ಲಿ ಹೊಸ ಚೆಂಡು ಮತ್ತು ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಗೌರವಿಸಬೇಕು ಅಂತ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್​ ಕೂಡ ಇದೇ ನಡೆಯನ್ನ ಅನುಕರಿಸಿದ್ರೆ, ಖಂಡಿತವಾಗಿ ಸಕ್ಸಸ್ ಕಾಣ್ತಾರೆ. ಹವಮಾನ ಉತ್ತಮವಾಗಿದ್ರೆ, ಸ್ವಿಂಗ್ ಕಡಿಮೆಯಾಗಿರುತ್ತೆ. ಈ ಅವಕಾಶಕ್ಕಾಗಿ ರೋಹಿತ್ ಶರ್ಮಾ ಕಾಯಬೇಕು ಎಂದಿದ್ದಾರೆ.

ಈಗಾಗಲೇ ರೋಹಿತ್​ ಇಂಗ್ಲೆಂಡ್​​ನಲ್ಲಿ ಸಾಕಷ್ಟು ಪಂದ್ಯಗಳನ್ನ ಆಡಿದ ಅನುಭವ ಹೊಂದಿದ್ದಾರೆ. ಪಿಚ್​ಗಳನ್ನ ಅರಿತಿದ್ದಾರೆ ಕೂಡ. ಆದರೂ ನಾನು ನೀಡುವ ಸಲಹೆ ಏನಂದ್ರೆ, ಅಲ್ಲಿನ ಪರಿಸ್ಥಿತಿಗಳನ್ನು ಗೌರವಿಸಬೇಕು ಎಂದಿದ್ದಾರೆ.

The post ಹಿಟ್​​ಮ್ಯಾನ್​​ ರೋಹಿತ್​ಗೆ ಸೆಹ್ವಾಗ್​ ಕೊಟ್ಟ ಟಿಪ್ಸ್ ಏನು..? appeared first on News First Kannada.

Source: newsfirstlive.com

Source link