ಹಿಮದ ರಾಶಿಯ ನಡುವೆ ವಾಲಿಬಾಲ್​ ಆಡಿದ ಭಾರತೀಯ ಯೋಧರು: ವಿಡಿಯೋ ವೈರಲ್​ | Indian army jawans play volleyboll in snow video goes viral


ಹಿಮದ ರಾಶಿಯ ನಡುವೆ ವಾಲಿಬಾಲ್​ ಆಡಿದ ಭಾರತೀಯ ಯೋಧರು: ವಿಡಿಯೋ ವೈರಲ್​

ವಾಲಿಬಾಲ್​ ಆಡುತ್ತಿರುವ ಯೋಧರು

ದೇಶದ ಜನತೆ ಯಾವುದೇ ಭಯೋತ್ಪಾದಕರ ಭಯವಿಲ್ಲದೆ  ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಸೈನಿಕರು. ದೇಶ ಕಾಯವ ಯೋಧರು ಹೆತ್ತವರು, ಮಡದಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ. ಮಳೆ. ಮೈ ಕೊರೆಯುವ ಚಳಿ, ಬಿಸಿಲೆನ್ನದೆ ಮನೆಯವರೊಂದಿಗಿನ ಹಬ್ಬದ ಖುಷಿ ಇಲ್ಲದೆ ದೇಶಕ್ಕಾಗಿ ಜೀವನ ಮುಡಿಪಿಡುವ ಅವರ ಧೈರ್ಯ, ಸಾಹಸ ಪದಗಳಿಗೆ ನಿಲುಕದ್ದು. ತಮ್ಮ ಜತೆ ಇರುವವರನ್ನೇ ಕುಟುಂಬ ಎಂದು ತಿಳಿದು ಇದ್ದಲ್ಲೇ ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿಯನ್ನು ನಿಜಕ್ಕೂ ಮೆಚ್ಚಲೇಬೇಕು. ಇದೀಗ ಭಾರತೀಯ ಯೋಧರು ಮೈ ಕೊರೆಯುವ ಚಳಿಯಲ್ಲಿ ಹಿಮದ ಮಧ್ಯೆ ವಾಲಿಬಾಲ್​ ಆಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಸ್ಟ್​ ವಿಂಟರ್​ ಗೇಮ್ಸ್​ ಎಂದು ಕ್ಯಾಪ್ಷನ್​ ನೀಡುವ ಮೂಲಕ ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಯೋಧರು ವಾಲಿಬಾಲ್​ ಆಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ವಿಡಿಯೋದಲ್ಲಿ ಯೋಧರು ಎರಡು ತಂಡಗಳಾಗಿ ಹಿಮದ ರಾಶಿಯ ಮಧ್ಯೆ ವಾಲಿಬಾಲ್​ ಆಡುವುದನ್ನು ಕಾಣಬಹುದು. ಸದ್ಯ ಟ್ವಿಟರ್​ನಲ್ಲಿ ವಿಡಿಯೋ ಸಖತ್​ ವೈರಲ್​ ಆಗಿದೆ.  ನೆಟ್ಟಿಗರು ಯೋಧರ ಸಂಭ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಈವರೆಗೆ  ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು 13 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ವಿಡಿಯೋ ನೋಡಿ ಬಳಕೆದಾರರು ಯೋಧರ ಸಾಹಸಕ್ಕೆ ಸೆಲ್ಯೂಟ್​ ಮಾಡಿದ್ದಾರೆ. ಚಳಿಗಾಲದ ಕಾರಣ ಉತ್ತರ ಭಾರತದಲ್ಲಿ ಹಿಮಪಾತವಾಗುತ್ತಿದೆ. ತಾಪಮಾನ ಮೈನಸ್​ ಗೆ ಇಳಿದಿದೆ ಹೀಗಿದ್ದರೂ ಯೋಧರು ದೇಶವನ್ನು ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹಿಮಪಾತದ ನಡುವೆಯೂ ಯೋಧರು ಎದೆಗುಂದದೆ ಹಿಮದ ರಾಶಿಯ ನಡುವೆ ನಿಂತ ವಿಡಿಯೋ ವೈರಲ್ ಅಗಿತ್ತು.

TV9 Kannada


Leave a Reply

Your email address will not be published. Required fields are marked *