ಹಿಮಾಚಲ ಪ್ರದೇಶ: ಕೇಬಲ್ ಕಾರಿನಲ್ಲಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸಿಲುಕಿದ್ದ ಎಲ್ಲ ಪ್ರಯಾಣಿಕರ ರಕ್ಷಣೆ | All 11 people onboard were rescued after they were Stuck more than three hours in Himachal Cable Car


ಹಿಮಾಚಲ ಪ್ರದೇಶ: ಕೇಬಲ್ ಕಾರಿನಲ್ಲಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸಿಲುಕಿದ್ದ ಎಲ್ಲ ಪ್ರಯಾಣಿಕರ ರಕ್ಷಣೆ

ಹಿಮಾಚಲ ಪ್ರದೇಶದಲ್ಲಿ ಸಿಲುಕಿದ ಕೇಬಲ್ ಕಾರ್

ಎಲ್ಲಾ 11 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ತಂಡಗಳು ತೊಂದರೆ ಎದುರಿಸಬೇಕಾಯಿತು. ಎನ್‌ಡಿಆರ್‌ಎಫ್ ತಂಡವನ್ನು ಆದಷ್ಟು ಬೇಗ ಸ್ಥಳಕ್ಕೆ ಕೊಂಡೊಯ್ದಿದ್ದಕ್ಕಾಗಿ ಮತ್ತು ಸಿಕ್ಕಿಬಿದ್ದ ಜನರ ರಕ್ಷಣೆಗಾಗಿ…

ಪರ್ವಾನೂ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ (Himachal Pradesh) ಪರ್ವಾನೂ (Parwanoo) ಎಂಬಲ್ಲಿ ಸೋಮವಾರ ಮಧ್ಯಾಹ್ನ ಕೇಬಲ್ ಕಾರಿನಲ್ಲಿ(cable car) ಮೂರು ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದ 11 ಮಂದಿಯನ್ನು ರಕ್ಷಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್, “ಎಲ್ಲಿ ದೋಷ ಸಂಭವಿಸಿದ್ದು ಎಂಬುದರ ಕುರಿತು ನಾನು ವರದಿಯನ್ನು ಕೇಳುತ್ತೇನೆ” ಎಂದು ಹೇಳಿದರು. ಪ್ರಯಾಣಿಕರನ್ನು ಹೊರತರಲು ಕೇಬಲ್‌ನಲ್ಲಿ ರಕ್ಷಣಾ ಟ್ರಾಲಿಯನ್ನು ನಿಯೋಜಿಸಲಾಗಿದೆ. ಅವುಗಳನ್ನು ಕೆಳಗಿನ ಕೌಶಲ್ಯ ನದಿ ಕಣಿವೆಯ ಬೆಟ್ಟದ ಮೇಲೆ ಒಂದೊಂದಾಗಿ ಇಳಿಸಲಾಯಿತು ಎಂದು ಸೋಲನ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೀರೇಂದ್ರ ಶರ್ಮಾ ಹೇಳಿದ್ದಾರೆ. ಕೇಬಲ್ ಕಾರ್ ಟಿಂಬರ್ ಟ್ರಯಲ್ ಖಾಸಗಿ ರೆಸಾರ್ಟ್‌ನ ಜನಪ್ರಿಯ ವೈಶಿಷ್ಟ್ಯವಾಗಿದೆ. ಇದು ಚಂಡೀಗಢದಿಂದ ಕಸೌಲಿ ಮತ್ತು ಶಿಮ್ಲಾ ಮಾರ್ಗದಲ್ಲಿ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಪರ್ವಾನೂ ಹರ್ಯಾಣ, ಪಂಜಾಬ್ ಮತ್ತು ಚಂಡೀಗಢಗಳೊಂದಿಗೆ ಹಿಮಾಚಲ ಪ್ರದೇಶದ ತುದಿಯಲ್ಲಿರುವ ಕಾರಣ ಈ ಪ್ರದೇಶದಾದ್ಯಂತ ಜನರು ಇಲ್ಲಿ ಆಗಾಗ್ಗೆ ಭೇಟಿ ನೀಡುತ್ತಾರೆ.

ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದೆ ಮತ್ತು ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಎನ್‌ಐಗೆ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೂ ಸ್ಥಳದಲ್ಲಿತ್ತು.

ಕೇಬಲ್ ಕಾರ್ ಸಿಕ್ಕಿಹಾಕಿಕೊಂಡ ನಂತರ, ಸಿಕ್ಕಿಬಿದ್ದವರಲ್ಲಿ ಕೆಲವು ಹಿರಿಯ ಪ್ರವಾಸಿಗರು ಅವರ ಕಷ್ಟಗಳ ಬಗ್ಗೆ ವಿವರಿಸುವ ವಿಡಿಯೊವನ್ನೂ ಹಾಕಿದ್ದಾರೆ. “ನಾನು ಮಧುಮೇಹ ಮತ್ತು ಕಿಡ್ನಿ ರೋಗಿ ಎಂದು ಹಿರಿಯ ವ್ಯಕ್ತಿಯೊಬ್ಬರು ವಿಡಿಯೊದಲ್ಲಿ ಮತ್ತೆ ಮತ್ತೆ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಎಲ್ಲರೂ ಸುರಕ್ಷಿತರಾಗಿದ್ದಾರೆ: ಹಿಮಾಚಲ ಸಿಎಂ

ಎಲ್ಲಾ 11 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ತಂಡಗಳು ತೊಂದರೆ ಎದುರಿಸಬೇಕಾಯಿತು. ಎನ್‌ಡಿಆರ್‌ಎಫ್ ತಂಡವನ್ನು ಆದಷ್ಟು ಬೇಗ ಸ್ಥಳಕ್ಕೆ ಕೊಂಡೊಯ್ದಿದ್ದಕ್ಕಾಗಿ ಮತ್ತು ಸಿಕ್ಕಿಬಿದ್ದ ಜನರ ರಕ್ಷಣೆಗಾಗಿ ವಾಯುಪಡೆಯನ್ನು ತಂದಿದ್ದಕ್ಕಾಗಿ  ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ  ಸಿಎಂ ಜೈರಾಮ್ ಠಾಕೂರ್ ಹೇಳಿದ್ದಾರೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ನಾವು ಎದುರಿಸಿದ ದೊಡ್ಡ ಅಡಚಣೆಯೆಂದರೆ ಸಿಕ್ಕಿಬಿದ್ದ ಪ್ರವಾಸಿಗರನ್ನು ನಾವು ಸುರಕ್ಷಿತವಾಗಿ ರಕ್ಷಿಸಬಹುದೆಂದು ಮನವರಿಕೆ ಮಾಡುವುದು. ಸಂಪೂರ್ಣ ರಕ್ಷಣಾ ಕಾರ್ಯಗಳಿಗೆ  ಸುಮಾರು 3-4 ಗಂಟೆಗಳನ್ನು ತೆಗೆದುಕೊಂಡಿತು. ಇದಲ್ಲದೆ, ನಾವು ಇತ್ತೀಚೆಗೆ ರೋಪ್‌ವೇಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ ಎಂದು  ಎನ್​​ ಡಿಆರ್​​ಎಫ್ ಅಧಿಕಾರಿ  ಬಲ್ಜಿಂದರ್ ಸಿಂಗ್ ಹೇಳಿದ್ದಾರೆ.

TV9 Kannada


Leave a Reply

Your email address will not be published.