ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಈಗ ಏನು ಮಾಡಿದರೂ ಅದು ದೊಡ್ಡ ಸುದ್ದಿಯಾಗುತ್ತಲೇ ಇದೆ. ನಾಗಚೈತನ್ಯ ಜೊತೆ ಡಿವೋರ್ಸ್ ಆದ ನಂತರ ಸ್ಯಾಮ್ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ’ ಸಾಂಗ್ನಲ್ಲಿ ಮೈ ಚಳಿ ಬಿಟ್ಟು ಕುಣಿದು,ತಮ್ಮ ಸಿನಿ ಕೆರಿಯರ್ನ ಸೆಕೆಂಡ್ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಪ್ರಾರಂಭ ಮಾಡಿದ್ದಾರೆ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ಸಮಂತಾರ ಮೇಲೆ, ಪಾಸಿಟಿವ್ ಮತ್ತು ನೆಗೆಟಿವ್ ಕಮೆಂಟ್ಗಳ ಸುರಿಮಳೆಯಾಗಿತ್ತು. ಇದರ ಮಧ್ಯೆಯೂ ‘ಹೂ ಅಂತಿಯಾ’ ಹಾಡು ಸಖತ್ ಹಿಟ್ ಆಗಿತ್ತು.
ಸದ್ಯ ಸಮಂತಾ ತಮ್ಮ ಸ್ನೇಹಿತರೊಂದಿಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಬೀಡು ಬಿಟ್ಟಿದ್ದಾರೆ.ಸಮಂತಾ ತಮ್ಮ ಆತ್ಮೀಯ ಗೆಳತಿಯಾರಾದ ಸ್ನೇಹಾ ರೆಡ್ಡಿ ಮತ್ತು ಇತರರೊಂದಿಗೆ ಸ್ವಿಜರ್ಲ್ಯಾಂಡಿನ ಸುಂದರ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಸ್ವಿಟ್ಜರ್ಲ್ಯಾಂಡ್ಲ್ಲಿ ಎಂಜಾಯ್ ಮಾಡುತ್ತಿರುವ ಸಮಂತಾ, ದಟ್ಟ ಹಿಮ ಗುಡ್ಡಗಳ ನಡುವೆ ಸ್ಕೇಯಿಂಗ್ ಕಲಿಯುತ್ತಿದ್ದಾರೆ. ಹಿಮಗಳ ಮಧ್ಯೆ ಸ್ಕೇಯಿಂಗ್ ಕಲಿಯಲು ಸಮಂತಾ ರೆಡಿಯಾಗಿರುವ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.ಯಾರೂ ಏನೇ ಅಂದ್ರು, ಯಾರು ಏನೇ ಮಾತಾಡಿದ್ರು, ಸಮಂತಾ ಮಾತ್ರ ತಮ್ಮ ಕೆಲಸಗಳನ್ನು ಮಾಡಿಕೊಂಡು,ಎಂಜಾಯ್ ಮಾಡ್ತಿದ್ದಾರೆ.
ಸದ್ಯ ಸಮಂತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳ ಪಟ್ಟಿಯೇ ಇದೆ. ಶಾಕುಂತಲಾ, ಯಶೋಧ, ಸೇರಿ ಬಾಲಿವುಡ್ನಲ್ಲಿ 2 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದರ ಜೊತೆ ಹಾಲಿವುಡ್ಗೂ ಹಾರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಸಮಂತಾ.