‘ಹಿರಣ್ಯ’ ಟೈಟಲ್ ಧನಂಜಯ್ ಬಳಿ ಇತ್ತು..; ನಟ ರಾಜ್​ವರ್ಧನ್ ಹಂಚಿಕೊಂಡ್ರು ಕುತೂಹಲಕರ ಮಾಹಿತಿ | Actor Raj Vardhan reveals Hiranya title rights was with Dhananjay here is details


ಇತ್ತೀಚೆಗಷ್ಟೇ ‘ಹಿರಣ್ಯ’ (Hiranya Movie) ಚಿತ್ರ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ರಾಜ್​ವರ್ಧನ್ (Raj Vardhan) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಚ್ಚುಗತ್ತಿ ಮೂಲಕ ಐತಿಹಾಸಿಕ ಚಿತ್ರ ಮಾಡಿದ್ದ ಅವರ ಹೊಸ ಚಿತ್ರದ ಟೈಟಲ್ ‘ಹಿರಣ್ಯ’ ಎಂದಿರುವುದು ಕುತೂಹಲ ಮೂಡಿಸಿತ್ತು. ಈ ಕುರಿತು ಮಾತನಾಡಿರುವ ಚಿತ್ರತಂಡ, ಇದು ಐತಿಹಾಸಿಕ ಚಿತ್ರವಲ್ಲ, ಕಮರ್ಷಿಯಲ್ ಚಿತ್ರ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಸೀರ್ಷಿಕೆಯ ಬಗ್ಗೆ ರಾಜ್​ವರ್ಧನ್ ಕುತೂಹಲಕ ವಿಚಾರ ಹಂಚಿಕೊಂಡಿದ್ದಾರೆ. ‘ಹಿರಣ್ಯ’ ಶೀರ್ಷಿಕೆಯನ್ನು ನಟ ಧನಂಜಯ್ ಅವರ ಬ್ಯಾನರ್​ನಲ್ಲಿ ರಿಜಿಸ್ಟರ್ ಮಾಡಿಸಿದ್ದರಂತೆ. ಈ ಚಿತ್ರಕ್ಕೆ ಹಿರಣ್ಯ ಶೀರ್ಷಿಕೆ ಹೊಂದುತ್ತದೆ ಎಂದಾದ ನಂತರ ಅವರ ಬಳಿ ಹೋಗಿ ಕೇಳಿದರಂತೆ. ಆಗ ಪ್ರೀತಿಯಿಂದ ಧನಂಜಯ್ ಶೀರ್ಷಿಕೆಯ ಹಕ್ಕುಗಳನ್ನು ನೀಡಿದ್ದಾರೆ ಎಂದು ರಾಜ್​ವರ್ಧನ್ ನುಡಿದಿದ್ದಾರೆ. ಅಲ್ಲದೇ ಧನಂಜಯ್​ಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಶೀರ್ಷಿಕೆಯಿಂದ ಕುತೂಹಲ ಮೂಡಿಸಿರುವ ‘ಹಿರಣ್ಯ’ ಸದ್ಯದಲ್ಲೇ ಸೆಟ್ಟೇರಲಿದೆ. ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದು, ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್​ನಲ್ಲಿ ವಿಘ್ನೇಶ್ವರ್ ಮತ್ತುವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *