ಹಿರಿಯೂರು ಬಳಿ ಆಟೋ ರಿಕ್ಷಾ ಪಲ್ಟಿ, 10 ಜನರಿಗೆ ಗಾಯ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಸ್ಪತ್ರೆಗೆ ಭೇಟಿ – Ten injured and admitted to hospital after an auto rickshaw overturns near Hiriyur, MLA visits hospital video story in Kannadaಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಸ್ಥಿತಿ ವಿಚಾರಿಸಿದರು.

TV9kannada Web Team


| Edited By: Arun Belly

Nov 15, 2022 | 1:24 PM
ಚಿತ್ರದುರ್ಗ: ಗ್ರಾಮೀಣ ಭಾಗಗಳಲ್ಲಿ ಜನರ ಪ್ರಮುಖ ಸಾರಿಗೆ ಸಾಧನವಾಗಿರುವ ಟಂ ಟಂ (Tum Tum) ಮತ್ತು ಆಟೋ ರಿಕ್ಷಾಗಳು ಅಪಘಾತಕ್ಕೀಡಾಗುವ ಸಂದರ್ಭಗಳು ಜಾಸ್ತಿ. ಮಂಗಳವಾರ ಬೆಳಗ್ಗೆ ಜಿಲ್ಲೆಯ ಹಿರಿಯೂರು (Hiriyur) ತಾಲ್ಲೂಕಿನ ದುಗ್ದಾಣಿಹಟ್ಟಿ ಬಳಿ ವೇಗವಾಗಿ ಚಲಿಸುತ್ತಿದ್ದ ಒಂದು ಆಟೋ ರಿಕ್ಷಾ ಪಲ್ಟಿ ಹೊಡೆದು ರಸ್ತೆ ಪಕ್ಕ ಸುಮಾರು 10 ಅಡಿ ಆಳಕ್ಕೆ ಬಿದ್ದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ 10 ಜನ ಗಾಯಗೊಂಡಿದ್ದು ಅವರೆಲ್ಲರನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Purnima Srinivas) ಆಸ್ಪತ್ರೆಗೆ ತೆರಳಿ ಗಾಯಾಳುಗಳ ಸ್ಥಿತಿ ವಿಚಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

TV9 Kannada


Leave a Reply

Your email address will not be published.