ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ದರ್ಬಾರ್; ಅಧಿಕಾರಿಗಳು ಅಪ್ಸೆಟ್


ಚಿತ್ರದುರ್ಗ:ಹಿರಿಯೂರು ಶಾಸಕಿ ಪೂರ್ಣಿಮಾ ಅನುಪಸ್ಥಿತಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.

ಹಿರಿಯೂರು ತಾಲೂಕಿನ ಖಂಡೇನಹಳ್ಳಿ, ಅಬ್ಬಿನಹೊಳೆ, ರಂಗೇನಹಳ್ಳಿ, ಹರ್ತಿಕೋಟೆ, ಎಂ.ಡಿ.ಕೋಟೆ ಪಂಚಾಯತಿಗಳಲ್ಲಿ ಶ್ರೀನಿವಾಸ್ ನಡೆಯಿಂದ ಅಧಿಕಾರಿಗಳು ಸುಸ್ತಾಗಿದ್ದಾರೆ.

ಒಂದು ವಾರದಿಂದ ದಿನಕ್ಕೊಂದು ಪಂಚಾಯಿತಿಗೆವಿಸಿಟ್ ಮಾಡುತ್ತಿರುವಾಗ ಶಾಸಕಿ ಪತಿ ಶ್ರೀನಿವಾಸ್​ಗೆ ಜಿಲ್ಲಾ ಪಂಚಾಯತಿ ಎಇಇ ಹನುಮಂತಪ್ಪ, ಲೋಕೋಪಯೋಗಿ ಇಲಾಖೆ ಎಇಇ ನವೀನ್, ತಾಲೂಕು ಪಂಚಾಯತಿ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ.

ಪ್ರತಿ ಗ್ರಾಮ ಪಂಚಾಯತಿಗೂ ತಾಲೂಕು ಮಟ್ಟದ ಅಧಿಕಾರಿಗಳನ್ನ ಕರೆದುಕೊಂಡು ಹೋಗುತ್ತಿದ್ದಾರೆ.ಇನ್ನು ಇದಕ್ಕೆ ಸಂಬಂಧಿಸಿದಂತೆ ಶಾಸಕಿ ಪೂರ್ಣಿಮಾ ಅಧಿಕಾರವನ್ನು ಪತಿ ಶ್ರೀನಿವಾಸ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಹಿರಿಯೂರಿನಲ್ಲಿ ನಡೆದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶಂಕುಸ್ಥಾಪನೆ ವೇಳೆ ಶ್ರೀನಿವಾಸ್ ವೇದಿಕೆಯನ್ನು ಹಂಚಿಕೊಂಡಿದ್ದರು.ಅಷ್ಟೇ ಅಲ್ಲ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕಿ ಬದಲು ಪತಿ ಶ್ರೀನಿವಾಸ್ ಪ್ರಾಸ್ತಾವಿಕ ಭಾಷಣ ಮಾಡಿದ್ದಾರೆ.ಶಾಸಕಿ ಪೂರ್ಣಿಮಾ ಗಂಡ ಶ್ರೀನಿವಾಸ್ ವರ್ತನೆಗೆ ಸರ್ಕಾರಿ ಅಧಿಕಾರಿಗಳು ಬೇಸರಗೊಂಡಿದ್ದಾರೆ.

The post ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ದರ್ಬಾರ್; ಅಧಿಕಾರಿಗಳು ಅಪ್ಸೆಟ್ appeared first on News First Kannada.

News First Live Kannada


Leave a Reply

Your email address will not be published.