ಕೊರೊನಾ ತರುವ ಆಘಾತಗಳು ಒಂದೆರಡಲ್ಲ. ಇದರಿಂದ ಆಗುವ ನೋವು ಸಹಿಸಲಾಗುತ್ತಿಲ್ಲ. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಕೃಷ್ಣೇಗೌಡರು ಇನ್ನೇನಿದ್ರೂ ನೆನಪು. ಆದರೆ ಹಿರಿಯ ನಟನ ಕೊನೆಯ ಕ್ಷಣದಲ್ಲಿ ಕೊರೊನಾದಿಂದ ಏನೇನಾಯ್ತು ಹೇಳ್ತಿವಿ ನೋಡಿ.

ಸಿನಿಮಾದವರ ಬದುಕು ಸಿನಿಮಾದೊಳಗೆ ಇರೋ ಕಥೆಗಳಥರನೇ ಕರುಣ ಜನಕವಾಗಿರುತ್ತೆ. ಕೊರೊನಾ ಕಾರಣದಿಂದ ಇತ್ತೀಚೆಗೆ ಕನ್ನಡ ಸಿನಿಮಾ ರಂಗದ ಅನೇಕರು ನಿಧನರಾಗಿದ್ದಾರೆ. ನಿರ್ಮಾಪಕ ಕೋಟಿ ರಾಮು , ಪೋಷಕ ನಟ ಶಂಖನಾದ ಅರವಿಂದ್​, ನಿರ್ದೇಶಕ ರೇಣುಕಾ ಶರ್ಮಾ ಹೀಗೆ ಬಹಳಷ್ಟು ಜನ ಕನ್ನಡ ಕಲಾ ಲೋಕವನ್ನ ಬಿಟ್ಟು ಹೊರಟು ಬಿಟ್ಟಿದ್ದಾರೆ. ಈಗ ಹೆಸರಾಂತ ಪೋಷಕ ನಟ ಬಿ.ಎಂ.ಕೃಷ್ಣೇ ಗೌಡರು ಕೊರೊನಾದಿಂದ ನಿಧನರಾಗಿದ್ದಾರೆ.

ಹಳ್ಳಿ ಸಿನಿಮಾಗಳು ಇತ್ತು ಅದ್ರಲೂ ಡಿ ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾಗಳೆಂದ್ರೆ ಅಲ್ಲೋಂದು ಪಾತ್ರ ಬಿ.ಎಂ.ಕೃಷ್ಣೇ ಗೌಡರಿಗೆ ರಿಸರ್ವ್​​ ಆಗಿರುತ್ತಿತ್ತು. ಕನ್ನಡದ ಆಲ್​ ಮೋಸ್ಟ್ ಆಲ್ ಎಲ್ಲಾ ಸ್ಟಾರ್ ಕಲಾವಿರದ ಜೊತೆ ನಟಿಸಿ ಸೈ ಅನ್ನಿಸಿಕೊಂಡಿದ್ದ ಪೋಷಕ ಪಾತ್ರಧಾರಿ ಕೃಷ್ಣೇ ಗೌಡ ಅವರು ಇಹಲೋಕ ತ್ಯಜಿಸಿದ್ದಾರೆ. ಸೌಮ್ಯ ಸ್ವಾಭಾವ, ಮಾತು ಕಡಿಮೆ ಕೆಲಸ ಜಾಸ್ತಿ, ಸಿನಿಮಾ ರಂಗದಲ್ಲಿ ಸಂಭಾವನೆ ವಿಚಾರದಲ್ಲಿ ಎಷ್ಟೇ ಮೋಸ ಆಗಿದ್ದರು ಚಕ್ಕಾರ ಎತ್ತದೆ ನಿರ್ಮಾಪಕರ ಪರವಾಗಿಯೇ ನಿಲ್ಲುತ್ತಾ ಸತತ 40 ವರ್ಷ ಚಿತ್ರರಂಗದಲ್ಲೇ ಕಳೆದವರು ಕೃಷ್ಟೇ ಗೌಡ.

ಮೂಲತಃ ರಂಗಭೂಮಿ ಕಲಾವಿದರು ಕೃಷ್ಣೇ ಗೌಡರು. ಮುಖ್ಯ ಮಂತ್ರಿ ಚಂದ್ರು ಬಳಗದಲ್ಲಿ ಅನೇಕ ನಾಟಕಗಳನ್ನ ಮಾಡುತ್ತಾ ಸಿನಿಮಾ ರಂಗದಲ್ಲಿ ಬಲಗಾಲಿಟ್ಟವರು. ಆರಕ್ಕೂ ಏರದೇ ಮೂರಕ್ಕೂ ಇಳಿಯದೆ ಯಾವ ಸ್ಟಾರ್ ಡಮ್ಮು ಹಮ್ಮುಗಳಿಗೆ ಒಳಗಾಗದೇ ಸಾಮಾನ್ಯ ಮಾತ್ರಗಳಂತೆ ಸಾಮಾನ್ಯರಾಗಿಯೇ 300ಕ್ಕೂ ಹೆಚ್ಚು ಸಿನಿಮಾಗಳು 20ಕ್ಕೂ ಹೆಚ್ಚು ಸೀರಿಯಲ್ ಗಳಲ್ಲಿ ನಟಿಸಿದ್ದರು ಕೃಷ್ಟೇ ಗೌಡರು. ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗದಲ್ಲಿ ಇದ್ದ ಕೃಷ್ಣೇಗೌಡರು, ಅದರ ಜೊತೆಗೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮುಖ್ಯಮಂತ್ರಿ ನಾಟಕದಲ್ಲಿನ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅವರು ಒಳ್ಳೆಯ ವಾಲಿಬಾಲ್ ಆಟಗಾರ ಸಹ ಆಗಿದ್ದರು. ‘‘ಕರಿಮಲಯ ಕಗ್ಗತ್ತಲು’’ ಸಿನಿಮಾದಲ್ಲಿ ಕೃಷ್ಣೇ ಗೌಡರ ನಟನೆಗೆ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಜೊತೆಗೆ ಕೃಷ್ಣೇ ಗೌಡ ಮಗ ಮುರಳಿಯವರಿಗಾಗಿ ಅಂಜದಿರು ಅನ್ನೋ ಸಿನಿಮಾವನ್ನ 2009ರಲ್ಲಿ ನಿರ್ಮಾಣ ಮಾಡಿ ನಿರ್ಮಾಪಕರು ಆಗಿದ್ದರು. ಇಂತಿಪ್ಪ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬಿ.ಎಂ. ಕೃಷ್ಣೇ ಗೌಡ ಈ ಕೊರೊನಾ ಕಾಲದಲ್ಲಿ ನಿಧನರಾಗಿದ್ದಾರೆ.

ಕೃಷ್ಣೇ ಗೌಡರ ಬಗ್ಗೆ ಇಷ್ಟೆಲ್ಲ ಹೇಳೋಕೆ ಒಂದು ಕರುಣಾ ಜನಕ ಕಥೆ ಇದೆ. ಕೊರೊನಾ ಸೋಂಕಿಗೆ ಕೆಲ ದಿನಗಳ ಹಿಂದೆ ತುತ್ತಾದಿದ್ದರು. ಕೊರೊನಾ ಮಹಾಮಾರಿಯನ್ನ ಗೆದ್ದು ಮನೆಯನ್ನ ಸೇರಿದ್ದರು. ಆದ್ರೆ ಕೊರೊನಾ ಸೋಂಕು ಶ್ವಾಸ ಕೋಶದಲ್ಲಿ ಗಾಯ ಮಾಡಿದ್ದರಿಂದ ಮತ್ತೆ ಆಸ್ಪತ್ರೆಯಲ್ಲಿ ಐಸಿಯು ಬೆಡ್​​ನಲ್ಲಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ಪೋಷಕ ನಟ ಕೃಷ್ಣೇ ಗೌಡರು ನಿನ್ನೆ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದೇ ಸಂದರ್ಭ ಕೃಷ್ಣೇ ಗೌಡರ ಎರಡನೇ ಪುತ್ರ ಸತೀಶ್​​​​​​​​​​​ ಇಪ್ಪತ್ತು ದಿನಗಳ ಹಿಂದಷ್ಟೇ ಕೊರೊನಾದಿಂದ ನಿಧನರಾಗಿದ್ದರು ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಆದರೆ ವಿಪರ್ಯಾಸವೋ ಏನೋ.. ಈ ವಿಚಾರ ನಟ ಕೃಷ್ಣೇ ಗೌಡ ಅವರಿಗೆ ತಮ್ಮ ಕೊನೆಯ ಕ್ಷಣದವರೆಗೂ ಗೊತ್ತೇ ಆಗಲಿಲ್ಲ.

ತಿಂಗಳ ಹಿಂದೆ ಕೃಷ್ಣೇ ಗೌಡರಿಗೆ ಕೊರೊನಾ ಪಾಸಿಟಿವ್​ ದೃಢವಾಗಿದ್ದು, ಅದರಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಾಸಾಗಿದ್ದರು. ನಂತರ ಕಾಣಿಸಿಕೊಂಡ ಶ್ವಾಸಕೋಶದ ಇನ್ಫೆಕ್ಷನ್ ಇವರನ್ನ ಐಸಿಯುಗೆ ಸೇರುವಂತೆ ಮಾಡಿತ್ತು. ಕೃಷ್ಣೇ ಗೌಡರು ಐಸಿಯು ಸೇರಿದ ಸಂದರ್ಭದಲ್ಲೇ ಮಗನನ್ನ ಕಳೆದುಕೊಂಡಿದ್ದರು. ಆದರೆ ಈ ಬಗ್ಗೆ ಕೃಷ್ಣೇ ಗೌಡರಿಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಕೊರೊನಾದಿಂದ ಗುಣಮುಖರಾಗಿದ್ದರೂ ಕೂಡ, ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡದ ತೆರೆಯ ಮೇಲೆ ತನ್ನ ಸಹಜ ನಟನೆಯಿಂದ ಎದುರು ಇರೋ ನಟರ ನಟನೆಯ ವೈಭವನ್ನ ಹೆಚ್ಚು ಮಾಡುತ್ತಾ ಜನರ ಮನಸಿನಲ್ಲಿ ನಮ್ಮ ಮನೆಯ ಹಿರಿಯ ಇವ್ರು ಅನ್ನೋಷ್ಟರ ಮಟ್ಟಿಗೆ ಅಭಿನಯದ ಕಲೆಯನ್ನ ತೋರಿಸುತ್ತಿದ್ದ ನಟ ಇನ್ನಿಲ್ಲ. ಸ್ಯಾಂಡಲ್​​​ವುಡ್​​ನ ವಿಷ್ಣುವರ್ಧನ್, ರಮೇಶ್ ಅರವಿಂದ್, ಶಿವರಾಜ್‌ಕುಮಾರ್, ಅಂಬರೀಷ್‌, ಶಿವರಾಜ್‌ಕುಮಾರ್ ಸೇರಿದಂತೆ ಅನೇಕ ನಾಯಕ ನಟರುಗಳ ಜೊತೆಯಲ್ಲಿ ಕೃಷ್ಣೇಗೌಡರು ತೆರೆಹಂಚಿಕೊಂಡಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ನಟನೆಯಿಂದ ದೂರ ಇದ್ದ ಬಿ.ಎಂ ಕೃಷ್ಟೇ ಗೌಡರು ಇಹ ಲೋಕ ತ್ಯಜಿಸಿದ್ದಾರೆ. ಈ ಕೊರೊನಾ ಕಾಲದಲ್ಲಿ ಇಂತಹ ಹಿರಿಯ ನಟರನ್ನ ಕಳೆದು ಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ.

The post ಹಿರಿಯ ನಟ ಕೃಷ್ಣೇಗೌಡರ ಜೀವನದ ಕೊನೆ ಕ್ಷಣ ಏನಾಯ್ತು? ಯಾಕೆ ತಿಳಿಯಲಿಲ್ಲ ಮಗನ ಸಾವಿನ ಸುದ್ದಿ? appeared first on News First Kannada.

Source: newsfirstlive.com

Source link