ಹಿರಿಯ ನಟ ಚರಣ್ ರಾಜ್ ಮಾನವೀಯತೆ.. ಕೊರೊನಾ ವಾರಿಯರ್ಸ್​ಗೆ​ ಆಹಾರ ವಿತರಣೆ ​​

ಹಿರಿಯ ನಟ ಚರಣ್ ರಾಜ್ ಮಾನವೀಯತೆ.. ಕೊರೊನಾ ವಾರಿಯರ್ಸ್​ಗೆ​ ಆಹಾರ ವಿತರಣೆ ​​

ಬೆಂಗಳೂರು: ಲಾಕ್​ಡೌನ್ ಸಂಕಷ್ಟದ ಹಿನ್ನೆಲೆ ಸ್ಯಾಂಡಲ್​ವುಡ್​​ನ ತಾರೆಯರು ನೆರವು ನೀಡ್ತಿದ್ದಾರೆ. ಅದರಂತೆ ಹಿರಿಯನಟ ಚರಣ್ ರಾಜ್, ರಸ್ತೆಯಲ್ಲಿ ಡ್ಯೂಟಿ ನಿರ್ವಹಿಸೋ ಪೊಲೀಸರಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗೂ ಚರಣ್​ ರಾಜ್​ ತಾವೇ ಖುದ್ದಾಗಿ ಬಂದು ಬಿಸ್ಕೆಟ್ ಹಾಗೂ ಜ್ಯೂಸ್ ಹಂಚುತ್ತಿದ್ದಾರೆ. ಜೊತೆಗೆ ರಸ್ತೆಯಲ್ಲಿ ಡ್ಯೂಟಿ ಮಾಡ್ತಿರೋ ಪೊಲೀಸರಿಗೆ, ಕೋವಿಡ್ ವಾರ್ಡ್ ಹಾಗೂ ಶವಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆಹಾರ ಪೂರೈಸುತ್ತಿದ್ದಾರೆ.

ಪೊಲೀಸರು ನಿಮ್ಮ ಜೀವ ಕಾಪಾಡೋಕೆ ಪ್ರಯತ್ನ ಮಾಡ್ತಿದ್ದಾರೆ. ಎಲ್ಲರೂ ಪೊಲೀಸರ ಕಾರ್ಯಕ್ಕೆ ಸಹಕರಿಸಿ ಅಂತ ಚರಣ್ ರಾಜ್ ಮನವಿ ಮಾಡಿದ್ದಾರೆ.

The post ಹಿರಿಯ ನಟ ಚರಣ್ ರಾಜ್ ಮಾನವೀಯತೆ.. ಕೊರೊನಾ ವಾರಿಯರ್ಸ್​ಗೆ​ ಆಹಾರ ವಿತರಣೆ ​​ appeared first on News First Kannada.

Source: newsfirstlive.com

Source link