ಹಿರಿಯ ನಾಗರಿಕರೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಮಾರಣಾಂತಿನ ಹಲ್ಲೆ ಮಾಡಿದ ಮಾನವ ರೂಪಿ ರಾಕ್ಷಸನ ಹೆಸರು ಚಾರ್ಲ್ಸ್! | Man, brutally attacks a senior citizen over a trivial reason, latter admitted to a hospital

ನೀವು ನೋಡುತ್ತಿರುವ ವಿಡಿಯೋದ ಅಂತಿಮ ಭಾಗದಲ್ಲಿ ಒಬ್ಬ ನರರೂಪಿ ರಾಕ್ಷಸನ ಇಮೇಜ್ ಇದೆ. ಅವನು ಸೂಟು ಧರಿಸಿ ತನ್ನ ಮುಂದೆ ಒಂದು ಲ್ಯಾಪ್ ಟಾಪ್ ಇಟ್ಕೊಂಡು ಕೂತಿದ್ದಾನೆ. ಇವನ ಮುಖಕ್ಕೆ ಸೂಟು ಮತ್ತು ಲ್ಯಾಪ್ ಟಾಪ್ ಎರಡೂ ಕೇಡು. ಅಂದಹಾಗೆ ಚಾರ್ಲ್ಸ್ ಹೆಸರಿನ ಈ ವ್ಯಕ್ತಿ ಮಾಡಿರುವ ಘನಂದಾರಿ ಕೆಲಸ ಏನು ಗೊತ್ತಾ? ಆಸ್ಪತ್ರೆಯೊಂದರಲ್ಲಿ ಮಲಗಿರುವ ವಯಸ್ಸಾಗಿರುವ ಈ ವ್ಯಕ್ತಿಯನ್ನು ನೋಡಿ. ಇವರ ಮೇಲೆ ಚಾರ್ಲ್ಸ್ ಕಲ್ಲೆಸೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅವರ ಗದ್ದಕ್ಕೆ ಕಲ್ಲಿನೇಟು ಬಿದ್ದಿದೆ ಮತ್ತು ಎರಡು ಹಲ್ಲುಗಳು ಮುರಿದಿವೆ. ಇವರ ಹೆಸರು ಗ್ಯಾರಿ ರೊಜಾರಿಯೊ. ಇವರು ಮತ್ತು ಹಲ್ಲೆಕೋರ ಚಾರ್ಲ್ಸ್, ಬಾಣಸವಾಡಿ ಲೇಔಟ್ ವ್ಯಾಪ್ತಿಯಲ್ಲಿರುವ ಚಿನ್ನಪ್ಪ ಲೇಔಟ್ ನಲ್ಲಿ ನೆರೆಹೊರೆಯವರು. ರೊಜಾರಿಯೊ ಮನೆ ಎದುರು ಮನೆಯ ಮೊದಲ ಮಹಡಿಯಲ್ಲಿ ವಾಸವಾಗಿರುವ ಚಾರ್ಲ್ಸ್ ಅಲ್ಲಿಂದಲೇ ಕಲ್ಲು ಬೀಸಿ ಹಿರಿಯ ನಾಗರಿಕರನ್ನು ಗಾಯಗೊಳಿಸಿದ್ದಾನೆ.

ಒಂದು ಕ್ಷುಲ್ಲಕ ಕಾರಣಕ್ಕಾಗಿ ಚಾರ್ಲ್ಸ್ ಹಲ್ಲೆ ಮಾಡಿದ್ದಾನೆ. ರೊಜಾರಿಯೊ ಅವರ ಕುಟುಂಬ ಬಾಣಸವಾಡಿ ಪೊಲೀಸ್ ಸ್ಟೇಶನ್ ನಲ್ಲಿ ದಾಖಲಿಸಿರುವ ದೂರಿನ ಪ್ರಕಾರ ಅವರ ಸಾಕು ನಾಯಿ ಚಾರ್ಲ್ಸ್ ಮನೆ ಎದುರು ಮೂತ್ರ ವಿಸರ್ಜಿಸಿದೆಯಂತೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ.

ಚಾರ್ಲ್ಸ್ ಮಾತಿನ ಮೂಲಕ ಬೇಸರ ವ್ಯಕ್ತಪಡಿಸಿದ್ದರೆ, ಈ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಕೈಲಾಗದಂತಿರುವ ಅವನು ರೊಜಾರಿಯೊ ಅವರ ವಯಸ್ಸು ಸಹ ಲೆಕ್ಕಿಸದೆ ಅವರ ಮೇಲೆ ಕಲ್ಲು ಬೀಸಿದ್ದಾನೆ. ರೊಜಾರಿಯೊ ಅವರ ಮನೆ ಮನೆಯ ಮೇಲೆ ಅಳವಡಿಸಿರುವ ಕೆಮೆರಾನಲ್ಲಿ ಇದೆಲ್ಲ ಸೆರೆಯಾಗಿದೆ.

ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಚಾರ್ಲ್ಸ್ ಹೇಡಿಯಂತೆ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ಜಾರಿಯಲ್ಲಿಟ್ಟಿದ್ದಾರೆ. ಏತನ್ಮಧ್ಯೆ, ರೊಜಾರಿಯೊ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ:    ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

TV9 Kannada

Leave a comment

Your email address will not be published. Required fields are marked *