ಪತ್ರಕರ್ತ ವಾಗೀಶ್ ಕುಮಾರ್ ಜಿ ಎ (46 ವರ್ಷ)ಇಂದು ಬೆಳಗ್ಗೆ ನಿಧನಾರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಾಗೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಸುಮಿತ್ರಾ ದೊಡ್ಡಮನಿ, ಮಗಳು ಮಂದಾರ ಹಾಗೂ ಅಪಾರ ಸ್ನೇಹಿತರನ್ನು ಹೊಂದಿದ್ದರು.
ವಾಗೀಶ್ ಕುಮಾರ್ ಈಟಿವಿ ಮೂಲಕ ಟೆಲಿವಿಷನ್ ನ್ಯೂಸ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರು, ಟಿವಿ9, ಕಸ್ತೂರಿ ನ್ಯೂಸ್, ಸಮಯ ಟಿವಿ ಕಾರ್ಯ ನಿರ್ವಹಿಸಿ ಬಳಿಕ ಮುದ್ರಣ ಮಾಧ್ಯಮಕ್ಕೆ ಬಂದಿದ್ದರು. ವಿಜಯಕರ್ನಾಟಕ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಇನ್ನು ವಾಗೀಶ್ ಕುಮಾರ್ ಅವರ ನಿಧನಕ್ಕೆ ಈಟಿವಿಯ ಬಳಗದ ಸ್ನೇಹಿತರು, ವಿಜಯಕರ್ನಾಟಕ ಸ್ನೇಹಿತರು, ಸಂಬಂಧಿಕರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರೆಸ್ ಕ್ಲಬ್ ಅದ್ಯಕ್ಷ ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಹೆಚ್ ವಿ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.