ಬೆಂಗಳೂರು: ಪ್ರಕೃತಿ, ಹವಾಮಾನದಿಂದ ಸ್ವಂತವಾಗಿ ಆಕ್ಸಿಜನ್ ಉತ್ಪಾದನೆಗೆ ಕ್ರಮ ವಹಿಸಲಾಗ್ತಿದೆ ಅಂತ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪಪ್ ಸಚಿವರಿಗೆ ವಿಭಾಗವಾರು ಜವಾಬ್ದಾರಿ ನೀಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಮಾಡುವ ಬಗ್ಗೆ ಎಲ್ಲ ಸಚಿವರು ಸಹಕಾರ ನೀಡ್ತಿದ್ದಾರೆ. ರಾಜ್ಯದ ಎಲ್ಲರಿಗೂ ಉತ್ತಮ ಆರೋಗ್ಯ ನೀಡಲು ಸರ್ಕಾರ ಬದ್ದವಾಗಿದೆ ಎಂದರು. ಇದೇ ವೇಳೆ, ಹಿರಿಯ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದರಿಂದ ನನಗೆ ಆನೆ ಬಲ ಬಂದಿದೆ ಎಂದು ಸುಧಾಕರ್ ಹೇಳಿದ್ರು.

ನಿರೀಕ್ಷಿಸಿದಂತೆ ಜನತಾ ಕರ್ಫ್ಯೂ ಆಗ್ತಿಲ್ಲ
ಲಸಿಕೆಗೆ ನಾವು ಪ್ರಯತ್ನ ಮಾಡ್ತಿದ್ದೇವೆ. ಎಲ್ಲಾ ರಾಜ್ಯಗಳಿಂದಲೂ ಒತ್ತಡ ಇದೆ. ಆದ್ರೆ ಕೇವಲ 2 ಸಂಸ್ಥೆಗಳು ಮಾತ್ರ ಲಸಿಕೆ ಉತ್ಪಾದನೆ ಮಾಡ್ತಿವೆ. ಮೇ. 15ರ ನಂತರ ನಮಗೆ ಲಸಿಕೆ ಬರಲಿದೆ ಎಂದು ತಿಳಿಸಿದ್ರು. ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಮಾಡಲು ನಿರತರಾಗಿದ್ದೇನೆ. ನಾವು ನಿರೀಕ್ಷಿಸಿದಂತೆ ಜನತಾ ಕರ್ಫ್ಯೂ ಆಗ್ತಿಲ್ಲ. ಜನ ಸಹಕಾರ ನೀಡಬೇಕು. ಮುಂಬೈನಲ್ಲಿ ಸೊಂಕು ಕಡಿಮೆ ಆಗಿದೆ. 12ನೇ ತಾರೀಖಿನ ಹೊತ್ತಿಗೆ ಏನಾಗಲಿದೆ ಎಂದು ಗೊತ್ತಾಗಲಿದೆ. ಸೂಕ್ತ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿರುವೆ ಎಂದು ಸುಧಾಕರ್ ಹೇಳಿದ್ರು.

 1 ಬಾರಿ ರಾಜೀನಾಮೆ ಕೊಟ್ಟು, ಕಷ್ಟಪಟ್ಟು ಇಲ್ಲಿಗೆ ಬಂದಿದ್ದೇನೆ
ಇನ್ನು ಶಾಸಕ ರೇಣುಕಾಚಾರ್ಯ, ಸುಧಾಕರ್​​ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಒಂದು ಬಾರಿ ರಾಜೀನಾಮೆ ಕೊಟ್ಟು, ಕಷ್ಟಪಟ್ಟು ಇಲ್ಲಿಗೆ ಬಂದಿದ್ದೇನೆ. ಸರ್ಕಾರ ಕೂಡಾ ಬಂದಿದೆ. ಅವರಿಗೆ (ರೇಣುಕಾಚಾರ್ಯಗೆ) ಹೇಳಿ. ನಾನು ರಾಜಕೀಯ ಮಾತನಾಡಲ್ಲ. ಅವರ ಬಗ್ಗೆ ಅದೇ ಗೌರವ ಇದೆ ಎಂದರು.

ಇದನ್ನೂ ಓದಿ: ಆರೋಗ್ಯ ಸಚಿವ ಡಾ.ಸುಧಾಕರ್​ಗೆ ಮುಖಭಂಗ; ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ ಯಡಿಯೂರಪ್ಪ

The post ಹಿರಿಯ ಸಚಿವರಿಗೆ ಜವಾಬ್ದಾರಿ ಹಂಚಿಕೆಯಿಂದ, ನನಗೆ ಆನೆ ಬಲ ಬಂದಿದೆ -ಸುಧಾಕರ್ appeared first on News First Kannada.

Source: newsfirstlive.com

Source link