ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಿಕ 2 ಸಾವಿರ ರೂ. ಮಾಸಾಶನ ಮಂಜೂರು ಮಾಡಿದ ಸರ್ಕಾರ | Karnataka Government sanctioned 2 thousand rupees pension for senior writers and artists


3000 ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಿಕ 2 ಸಾವಿರ ರೂ. ಮಾಸಾಶನವನ್ನು ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಿಕ 2 ಸಾವಿರ ರೂ. ಮಾಸಾಶನ ಮಂಜೂರು ಮಾಡಿದ ಸರ್ಕಾರ

ವಿಧಾನ ಸೌಧ

ಬೆಂಗಳೂರು: 3000 ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಿಕ 2 ಸಾವಿರ ರೂ. ಮಾಸಾಶನವನ್ನು ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Letter

Letter

ಸುತ್ತೋಲೆ

2020-21ನೇ ಸಾಲಿನಲ್ಲಿ ಕಷ್ಟಪರಿಸ್ಥಿತಿಯಲ್ಲಿರುವ 3000 ಜನ ಹಿರಿಯ ಸಾಹಿತಿ ಮತ್ತು ಕಲಾವಿದರಿಗೆ ಮಾಸಾಶನ ಮಂಜೂರು ಮಾಡುವ ಬಗ್ಗೆ 1/01/2022ರ ಪತ್ರದಲ್ಲಿ ದಿನಾಂಕ: 09-09-2021ರಲ್ಲಿ ಶ್ರೀ ಶ್ರೀನಿವಾಸ (ಪಾಪು), ಮೈಸೂರು ಇವರ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕೃತಿಕ/ಸಾಹಿತ್ಯದ ಕ್ಷೇತ್ರದಲ್ಲಿ ಗಣನೀಯ ಸೇವ ಸಲ್ಲಿಸಿ, ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ 2019-20 ಮತ್ತು 2020-21ನೇ ಸಾಲಿಗೆ ಮಾಸಾಶನ ಮಂಜೂರು ಮಾಡಲು ರಚಿಸಲಾಗಿರುವ ಆಯ್ಕೆ ಸಮಿತಿಯು 2019-20 ಹಾಗೂ 2020-21ನೇ ಸಾಲಿನಲ್ಲಿ 2000 ಜನ ಸಾಹಿತಿ/ಕಲಾವಿದರಿಗೆ ಮಾಸಾಶನ ಮಂಜೂರು ಮಾಡಲು ಶಿಫಾರಸ್ಸು ಮಾಡಿತ್ತು.

ದಿನಾಂಕ: 21-06-2022ರ ಪತ್ರದಲ್ಲಿ, 2018-19ನೇ ಸಾಲಿನಲ್ಲಿ 1000 ಜನರಿಗೆ ಮಾಸಾಶನ ಪಾವತಿಸಲು ಮಂಜೂರಾತಿ ಕೋರಿದ್ದು, ಮಾಹಯಾನ ರೂ.2,000/-ಗಳಂತೆ ಒಟ್ಟು 3000 ಜನ ಸಾಹಿತಿ/ಕಲಾವಿದರಿಗೆ ಮಾಸಾಶನ ಪಾವತಿಸಲು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಮಾಸಾಶನ ಕೋರಿ ಅರ್ಜಿ ಸಲ್ಲಿಸಿರುವ ಸಾಹಿತಿ ಮತ್ತು ಕಲಾವಿದರುಗಳಿಗೆ ಸಂಬಂಧಪಟ್ಟಂತೆ, ಆಯ್ಕೆ ಸಮಿತಿಯು ಆಯ್ಕೆ ಮಾಡಿರುವ ಒಟ್ಟು 3000 ಅರ್ಹ ಸಾಹಿತಿ ಮತ್ತು ಕಲಾವಿದರುಗಳಿಗೆ ಮಾಹೆಯಾನ ರೂ.2,000/- (ಎರಡು ಸಾವಿರ ರೂಪಾಯಿಗಳು ಮಾತ್ರ) ಗಳಂತೆ ಮಾಸಾಶನವನ್ನು ಸಪ್ಟೆಂಬರ್ 1, 2022 ರಿಂದ ಜಾರಿಗೆ ಬರುವಂತೆ ಪಾವತಿಸಲು ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.