ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಬರ್ತಿದೆ ಅಂತಾ ನಾವು ನಿಮ್ಗೇ ಮೊದ್ಲೇ ಹೇಳಿದ್ವಿ. ಆ ಶೋನ ಪ್ರೊಮೊ ಕೂಡಾ ರಿಲೀಸ್​ ಆಗಿದ್ದು, ಬಿಗ್​ಬಾಸ್​ ಸೀಸನ್​ 7ರ ವಿನ್ನರ್​ ಶೈನ್​ ಶೆಟ್ಟೆ ಶೋ ಹೋಸ್ಟ್​ ಮಾಡುವ ವಿಚಾರವನ್ನು ಕೂಡಾ ನಿಮಗೆ ತಿಳಿಸಿದ್ವಿ.. ಆದ್ರೀಗಾ ಆ ಶೋನ ಜಡ್ಜ್‌​ ಯಾರಾಗಲಿದ್ದಾರೆ ಎಂಬ ಮಾಹಿತಿಯನ್ನು ನಾವು ನಿಮಗೆ ನೀಡ್ತಿವಿ.

ಹೌದು, ಡ್ಯಾನ್ಸ್​ ಡ್ಯಾನ್ಸ್​ ಶೋ ಬಗ್ಗೆ ನಿಮಗೆ ನಾವು ಹೆಚ್ಚು ಹೇಳೋದೆ ಬೇಡ.. ​ ಆಡಿಶನ್ ಪ್ರೊಸೆಸ್‌ ಕೂಡ ನಡೀತಿದೆ. ಸ್ಪರ್ಧಿಗಳು ಸ್ಟ್ರಾಂಗ್​ ಇದ್ಮೇಲೆ ಜಡ್ಜಸ್​ಗಳು ಕೂಡಾ ಹಾಗೆ ಇರ್ಬೆಕು ಅಲ್ವಾ.. ಇದೀಗಾ ಈ ಶೋಗೆ ಕನ್ನಡದ ನಟ ಮಾತ್ರವಲ್ಲ ಸೂಪರ್​ ಡ್ಯಾನ್ಸ​ರ್​ ಜಡ್ಜ್​ ಸೀಟ್​ ಅಲಂಕರಿಸಲಿದ್ದಾರೆ. ಆ ನಟ ಯಾರು ಅಂತಿರಾ? ಯೆಸ್​ ಅವರ ಮತ್ತ್ಯಾರು ಅಲ್ಲಾ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವ್​ರಾಜ್.

ಹೌದು, ಪ್ರಜ್ವಲ್​ ಅವರಿಗೆ ಡ್ಯಾನ್ಸ್​ ಅಂದ್ರೆ ತುಂಬಾನೆ ಇಷ್ಟ.. ಅವರು ಚಿಕ್ಕ ವಯಸ್ಸಿನಲ್ಲೆ ಡ್ಯಾನ್ಸ್​ ಕ್ಲಾಸ್​ ಗೆ ಹೋಗಿ ಸಾಕಷ್ಟು ಸ್ಟೇಜ್​ ಪರ್ಫಾಮೆನ್ಸ್​ ನೀಡಿದ್ದಾರೆ ಮಾತ್ರವಲ್ಲ ಕಾಂಪಿಟೇಷನ್​ಗಳಲ್ಲೂ ಭಾಗಿಯಾಗಿದ್ದಾರೆ.. ಪ್ರಜ್ವಲ್​ ಅವರ ಪತ್ನಿ ರಾಗಿಣಿ ಪ್ರಜ್ವಲ್​ ಕೂಡಾ ಸಖತ್​ ಡ್ಯಾನ್ಸ್​ರ್​.. ರಾಗಿಣಿ ಡ್ಯಾನ್ಸ್​ ಕ್ಲಾಸ್​ ಅನ್ನು ಕೂಡಾ ನಡೆಸ್ತಾರೆ. ವಿಶೇಷ ಅಂದ್ರೆ ಪ್ರಜ್ವಲ್​ ಹಾಗೂ ರಾಗಿಣಿ ಫಸ್ಟ್​ ಮೀಟ್​ ಆಗಿ ಲವ್​ ಆಗಿದ್ದು ಕೂಡಾ ಇವರಿಬ್ಬರು ಒಂದೇ ಡ್ಯಾನ್ಸ್​ ಕ್ಲಾಸ್​ಗೆ ಹೋದಾಗ.

ಇನ್ನೂ ಸೋಶಿಯಲ್​ ಮೀಡಿಯಾದಲ್ಲೂ ಕೂಡಾ ಪ್ರಜ್ವಲ್​ ಹಾಗೂ ರಾಗಿಣಿ ಫ್ರಿ ಟೈಮ್​ಯಿದ್ದಾಗ ಡ್ಯಾನ್ಸ್​ ವಿಡಿಯೊಗಳನ್ನು ಕೂಡಾ ಅಪ್​ಲೋಡ್​ ಮಾಡ್ತಾರೆ. ಹೀಗೇ ಪ್ರಜ್ವಲ್​ ಹಾಗೂ ಡ್ಯಾನ್ಸ್​ಗೆ ಸಾಕಷ್ಟು ನಂಟಿದೆ.

ಈ ಮುಂಜೆ ಪ್ರಜ್ವಲ್​ ಯಾವ ಶೋನಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿರಲಿಲ್ಲಾ. ಫಸ್ಟ್‌ ಟೈಮ್‌ ಡ್ಯಾನ್ಸಿಂಗ್ ರಿಯಾಲಿಟಿ ಶೋಗೆ ಜಡ್ಜ್‌ ಆಗ್ತಿದ್ದಾರೆ. ಇನ್ನೂ ಈ ಬಗ್ಗೆ ಸ್ವತಃ ಪ್ರಜ್ವಲ್​ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ್ದು.. ಡ್ಯಾನ್ಸ್​ ಡ್ಯಾನ್ಸ್​ ಶೋ ಬಗ್ಗೆ ಮಾತುಕತೆ ನಡೆಯುತ್ತಿದೆ. ಪ್ರೊಮೋ ಶೂಟ್‌ಗೆ ತಯಾರಿ ನಡೀತಿದೆ. ಸದ್ಯದಲ್ಲೇ ಪ್ರೊಮೋ ರಿಲೀಸ್ ಆಗಲಿದೆ ಎಂದಿದ್ದಾರೆ.

ಒಂದೆಡೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯೂಸಿ ಇರುವ ಪ್ರಜ್ವಲ್​.. ಇದೀಗಾ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಜಡ್ಜ್​ ಆಗಿ ಬಂದ್ರೆ ಅವರ ಅಭಿಮಾನಿಗಳು ಫುಲ್​ ಖುಷಿ ಪಡ್ತಾರೆ. ಜೊತೆಗೆ ಕಂಟೆಸ್ಟೆಂಟ್​ಗಳು ಕೂಡಾ ಒಳ್ಳೆ, ಜಡ್ಜ್​ ಸಿಕ್ಕಿದ್ರಲ್ಲಾ ಅಂತಾ ಸಂತಸ ಪಡೋದ್ರಲ್ಲಿ ನೋ ಡೌಟ್​..

The post ಹಿರಿ ತೆರೆಯಿಂದ ಕಿರುತೆರೆಗೆ ಬರ್ತಿದ್ದಾರೆ ಪ್ರಜ್ವಲ್ ದೇವರಾಜ್! appeared first on News First Kannada.

Source: newsfirstlive.com

Source link