ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚುಟುಕು ಸರಣಿ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿ ಕುರಿತು ಟೀಮ್ ಇಂಡಿಯಾದ ಅಕ್ಷರ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ರೀತಿಯ ರಣತಂತ್ರಗಳೊಂದಿಗೆ ಸಜ್ಜಾಗುತ್ತಿದ್ದೇವೆ ಎಂದಿದ್ದಾರೆ.
ಭಾರತದ ಸ್ಪಿನ್‌ಗೆ ಸಹಕಾರಿಯಾಗುವ ಪಿಚ್‌ನಲ್ಲಿ ನ್ಯೂಜಿಲೆಂಡ್ ಪರದಾಡಬಹುದು. ಹಾಗಂತ ಅವರನ್ನು ಸುಲಭವಾಗಿ ಪರಿಗಣಿಸಬಾರದು. ಹೀಗೆ ಮಾಡಿದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ಆದರೂ ನಮಗೆ ಇಲ್ಲಿ ತವರಿನ ಲಾಭ ದೊರೆಯಲಿದೆ ಎಂದಿದ್ದಾರೆ.
ನಮ್ಮನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದಾರೆ. ಹಾಗಾಗಿ ಸಾಕಷ್ಟು ಪ್ಲಾನ್ಗಳನ್ನ ಹಾಕಿಕೊಂಡಿದ್ದೇವೆ. ಅದರಂತೆಯೇ ಮುನ್ನಡೆಯಲು ಸಿದ್ಧರಾಗಿದ್ದೇವೆ ಎಂದು ಅಕ್ಷರ್ ಹೇಳಿದ್ದಾರೆ.