ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಫ್ಘಾನ್ ವಿರುದ್ಧ ಆಲ್‌ರೌಂಡ್ ಆಟವಾಡಿದ ಭಾರತ 66 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದ ಕುರಿತು ಮಾತನಾಡಿದ ಸೆಹ್ವಾಗ್, ‘ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಿಂದಲೇ ಅಫ್ಘಾನ್ ವಿರುದ್ಧ ಜಯ ಸಾಧ್ಯವಾಗಿದೆ. ಆಟಗಾರರು ಕ್ಯಾಚ್‌ಗಳನ್ನು ಕೈಚೆಲ್ಲದೆ ಉತ್ತಮ ರೀತಿಯಲ್ಲಿ ಫೀಲ್ಡಿಂಗ್ ಮಾಡಿದರು ಎಂದರು.
ಇದರಿಂದ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಯಿತು. ಮುಂದಿನ ಪಂದ್ಯಗಳಲ್ಲೂ ಭಾರತ ಇದೇ ರೀತಿಯ ಪ್ರದರ್ಶನ ತೋರಬೇಕು. ನಾವು ಎದುರಾಳಿ ತಂಡದ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಬೇಕೇ ಹೊರತು ಸುಲಭವಾಗಿ ಶರಣಾಗಬಾರದು’ ಎಂದು ಸಲಹೆ ನೀಡಿದ್ದಾರೆ.