ಹೀನಾಯ ಸೋಲು ಕಂಡ ಕಂಗನಾ ರಣಾವತ್; 50 ಲಕ್ಷ ರೂ. ದಾಟಲಿಲ್ಲ ‘ಧಾಕಡ್’ ಸಿನಿಮಾ ಗಳಿಕೆ | Dhaakad Movie First day Collection Kangana Ranaut Movie Collects 50 Lakhs on First day


‘ಧಾಕಡ್​’ ಸಿನಿಮಾ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಕಾರಣಕ್ಕೆ ಅವರು ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಿ ಮೊದಲ ದಿನದ ಆಟ ಮುಗಿಸಿದೆ.

ಕಂಗನಾ ರಣಾವತ್ (Kangana Ranaut) ಬಾಲಿವುಡ್​ನಲ್ಲಿ ವಿವಾದಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನ ಅನೇಕ ಸ್ಟಾರ್​ಗಳ ಬಗ್ಗೆ  ಅವರಿಗೆ ಅಸಮಾಧಾನ ಇದೆ. ಕಂಗನಾ ಅವರ ಮಾತುಗಳು ಅನೇಕರಿಗೆ ಇಷ್ಟ ಆಗುವುದಿಲ್ಲ. ಅವರ ಜತೆ ಸ್ನೇಹಕ್ಕಿಂತಲೂ ವಿರೋಧ ಕಟ್ಟಿಕೊಂಡವರೇ ಜಾಸ್ತಿ. ಈಗ ಅವರ ನಟನೆಯ ‘ಧಾಕಡ್’ ಸಿನಿಮಾ (Dhaakad Movie) ಹೀನಾಯವಾಗಿ ಸೋತಿದೆ. ಈ ಸೋಲಿನಿಂದ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗಬಹುದು. ಸ್ಟಾರ್ ಪಾತ್ರವರ್ಗ ಇದೆ ಎಂದಾದರೆ ಬಾಲಿವುಡ್​ ಸಿನಿಮಾ ಮೊದಲ ದಿನ ಒಂದು ಕೋಟಿ ರೂಪಾಯಿ ಆದರೂ ಗಳಿಕೆ ಮಾಡುತ್ತದೆ. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಲು ಒದ್ದಾಡಿದೆ.

‘ಧಾಕಡ್​’ ಸಿನಿಮಾ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಕಾರಣಕ್ಕೆ ಅವರು ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಬಾಲಿವುಡ್​ನಲ್ಲಿ ಸಿನಿಮಾಗಳು ಸತತ ಸೋಲು ಕಾಣುತ್ತಿವೆ. ಇಂಥ ಸಂದರ್ಭದಲ್ಲಿ ಕ್ರಾಂತಿ ಮಾಡುವ ಉದ್ದೇಶ ಅವರದ್ದಾಗಿತ್ತು. ಆದರೆ, ಅವರು ಕಂಡಿದ್ದು ಮಾತ್ರ ಹೀನಾಯ ಸೋಲು.

ಬಾಲಿವುಡ್​ನಲ್ಲಿ ‘ಭೂಲ್​ ಭುಲಯ್ಯ 2’ ಹಾಗೂ ‘ಧಾಕಡ್​’ ಸಿನಿಮಾ ಮೇ 20ರಂದು ಬಿಡುಗಡೆ ಆದವು. ‘ಭೂಲ್ ಭುಲಯ್ಯ 2’ ಮೊದಲ ದಿನ ಗಳಿಸಿದ್ದು ಬರೋಬ್ಬರಿ 14 ಕೋಟಿ ರೂಪಾಯಿ. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಿ ಮೊದಲ ದಿನದ ಆಟ ಮುಗಿಸಿದೆ.

TV9 Kannada


Leave a Reply

Your email address will not be published. Required fields are marked *