ಹೀರೋ ಡರ್ಟ್ ಬೈಕಿಂಗ್: ಎಕ್ಸ್ ಪಲ್ಸ್ 200 4ವಿ ಜೊತೆ ರೂ. 10 ಲಕ್ಷ ನಗದು ಬಹುಮಾನ ಗೆದ್ದ ಚಾಂಪಿಯನ್ ಸ್ಪರ್ಧಿ – Hero Dirt Biking Challenge was concluded Asad Khan emerges as champion, check out all details


ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ಆಯೋಜಿಸಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯು ಮುಕ್ತಾಯಗೊಂಡಿದ್ದು, ಅಂತಿಮ ಸುತ್ತಿನಲ್ಲಿದ್ದ ಟಾಪ್ 20 ಸವಾರರು ನಡುವಿನ ಚಾಂಪಿಯನ್ ಸೆಣಸಾಟವು ರೋಚಕವಾಗಿತ್ತು.

ಹೀರೋ ಡರ್ಟ್ ಬೈಕಿಂಗ್: ಎಕ್ಸ್ ಪಲ್ಸ್ 200 4ವಿ ಜೊತೆ ರೂ. 10 ಲಕ್ಷ ನಗದು ಬಹುಮಾನ ಗೆದ್ದ ಚಾಂಪಿಯನ್ ಸ್ಪರ್ಧಿ

ಹೀರೋ ಮೋಟೊಕಾರ್ಪ್ ಕಂಪನಿಯು ಆಯೋಜಿಸಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ವಿಜೇತರು

ಹೀರೋ ಮೋಟೊಕಾರ್ಪ್(Hero Motocorp) ಕಂಪನಿಯು ಆಯೋಜಿಸಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಪೂರ್ಣಗೊಂಡಿದೆ. ಕಳೆದ ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ಡರ್ಟ್ ಬೈಕಿಂಗ್ ಚಾಲೆಂಜ್(Dirt Bike Challenge) ಸ್ಪರ್ಧೆಯು ಇದೀಗ ಮುಕ್ತಾಯಗೊಂಡಿದ್ದು, ಫೈನಲ್ ರೇಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ದೇಶಾದ್ಯಂತ ಕಳೆದ 4 ತಿಂಗಳಿನಿಂದ ವಿವಿಧ ಹಂತದಲ್ಲಿ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆ ಆಯೋಜಿಸಿದ್ದ ಹೀರೋ ಮೋಟೊಕಾರ್ಪ್ ಕಂಪನಿಯು ಅಂತಿಮ ಸ್ಪರ್ಧೆಗಾಗಿ ಟಾಪ್-20 ಸವಾರರನ್ನು ಆಯ್ಕೆ ಮಾಡಿಕೊಂಡಿತ್ತು. ಈ ವಾರಾಂತ್ಯದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯ ರೋಚಕ ಹಣಾಹಣಿಯಲ್ಲಿ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಕೇಶ್ ಎನ್. ಮತ್ತು ಗಿಡ್ಯುನ್ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.

ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಸ್ಪರ್ಧೆಯ ಎಲ್ಲಾ ಸುತ್ತುಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಒಲೆಸ್ಯಾ ಡಯಾಸ್ ಅವರನ್ನು ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಎಂದು ಗೌರವಿಸಲಾಯಿತು. ವಿಜೇತರು, ಮೊದಲ ಮತ್ತು ಎರಡನೇ ರನ್ನರ್‌ ಅಪ್‌ಗಳಿಗೆ ಕಂಪನಿಯು ತನ್ನ ಜನಪ್ರಿಯ ಎಕ್ಸ್ ಪಲ್ಸ್ 200 4ವಿ ಮೋಟಾರ್‌ ಸೈಕಲ್ ಜೊತೆಗೆ ಕ್ರಮವಾಗಿ ರೂ. 10 ಲಕ್ಷ, ರೂ. 6 ಲಕ್ಷ ಮತ್ತು ರೂ. 4 ಲಕ್ಷ ಮೌಲ್ಯದ ಪ್ರಾಯೋಜಕತ್ವದ ಪ್ರಶಸ್ತಿಗಳನ್ನು ಪಡೆದುಕೊಂಡರು.

Hero Dirt Bike Challenge

ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ವಿಜೇತರು

ಜೈಪುರದಲ್ಲಿರುವ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಆಫ್ ರೋಡ್ ಟ್ರ್ಯಾಕ್ ನಲ್ಲಿ ಅಂತಿಮ ಹಂತದ ಸ್ಪರ್ಧೆ ಆಯೋಜಿಸಿದ್ದ ಹೀರೋ ಮೋಟೋಕಾರ್ಪ್‌ ಕಂಪನಿಯು ಉತ್ತಮ ಅನುಭವಕ್ಕಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಮಾನಾಗಿ ಡರ್ಟ್ ಬೈಕಿಂಗ್ ಚಾಲೆಂಜ್ ವಿನ್ಯಾಸಗೊಳಿಸಿತ್ತು.

TV9 Kannada


Leave a Reply

Your email address will not be published.