ಹುಟ್ಟಿದ ದಿನವೇ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್’​ ಎಂದು ನಾಮಕರಣ ಮಾಡಿದ ಬಿಪಾಶಾ ಬಸು – Bipasha basu named her daughter devi basu singh grover on the day of her birth


ಬಿಪಾಶಾ ಬಸು ತಮ್ಮ ಮಗಳ ಪಾದಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್’​ ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

ಹುಟ್ಟಿದ ದಿನವೇ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್'​ ಎಂದು ನಾಮಕರಣ ಮಾಡಿದ ಬಿಪಾಶಾ ಬಸು

ಬಿಪಾಶಾ ಬಸು

ಆಲಿಯಾ ಭಟ್​ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದಾದ ಕೆಲವೇ ದಿನಗಳಲ್ಲಿ ‘ಬಿಪಾಶಾ ಬಸು'(Bipasha Basu) ಕೂಡ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದರು. ​ ಈ ವರ್ಷದ ಆಗಸ್ಟ್​ನಲ್ಲಿ ಬಿಪಾಶಾ ಬಸು ಅವರು ಪತಿ ಕರಣ್ ಸಿಂಗ್​ ಗ್ರೋವರ್​ ಅವರೊಂದಿಗೆ ಪ್ರೆಗ್ನೆಂಟ್​ ಇರುವ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ (ನವೆಂಬರ್12 ) ಬಿಪಾಶಾ ಬಸು ಅವರು ಮಗಳಿಗೆ ಜನ್ಮ ನೀಡಿದ್ದು, ಅದೇ ದಿನವೇ ಮಗಳ ಪಾದಗಳ ಫೋಟೋವನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮಗಳಿಗೆ ‘ದೇವಿ ಬಸು ಸಿಂಗ್ ಗ್ರೋವರ್ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ.

ಬಿಪಾಶಾ ಬಸು ಹಾಗೂ ಕರಣ್ ಸಿಂಗ್​ ಗ್ರೋವರ್ 2015ರ ‘ಅಲೋನ್ಸಿನಿಮಾದ ಸೆಟ್​ನಿಂದ ಇಬ್ಬರು ಪ್ರೀತಿಸುತ್ತಿದ್ದರು. 2016 ರ ಏಪ್ರಿಲ್​ 30ರಂದು ಇಬ್ಬರು ​ ಮದುವೆಯಾಗಿದ್ದರು, . ಇದಾದ 6 ವರ್ಷಗಳ ಬಳಿಕ ಅವರು ತಾಯಿಯಾಗಿದ್ದಾರೆ. ಇತ್ತೀಚೆಗೆ ಬಿಪಾಶಾ ಬಸು ಒಂದು ಸಂದರ್ಶನಲ್ಲಿ ಮಾತನಾಡುವಾಗ ಪ್ರೆಗ್ನೆಂಟ್ ಸಮಯದಲ್ಲಿ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದರು,‘ಸರಿಯಾಗಿ ಊಟ ಸೇರುತ್ತಿರಲಿಲ್ಲ, ಇದರಿಂದಾಗಿ ನಾನು ನನ್ನ ತೂಕವನ್ನ ಕಳೆದುಕೊಂಡೆಎಂದಿದ್ದಾರೆ.


ಬಿಪಾಶಾ ಬಸು ದೇವಿ ಭಕ್ತೆಯಾಗಿದ್ದು ಮಗುವಿಗೆ ಕೂಡ ಅದೇ ಹೆಸರನ್ನು ಇಟ್ಟಿದ್ದಾರೆ. ಮಗಳ ಪಾದಗಳ ಫೋಟೋ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು, ‘ನಿಮ್ಮ ಆಸೆಯಂತೆಯೇ ಹೆಣ್ಣು ಮಗು ಆಗಿದೆ, ದೇವಿ ನಿಮಗೆ ಒಳ್ಳೆಯದು ಮಾಡಲಿ ಎಂದು ಕಾಮೆಂಟ್​ಗಳ ಮೂಲಕ ಶುಭ ಕೋರುತ್ತಿದ್ದಾರೆ.

TV9 Kannada


Leave a Reply

Your email address will not be published.