ಬೆಂಗಳೂರು: ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ವರ್ಷ ಕಳುವಾಗಿದ್ದ ಮಗುವನ್ನ ಬಸವನಗುಡಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಮಗು ಕದ್ದ ವೈದ್ಯೆಯನ್ನೂ ಅರೆಸ್ಟ್ ಮಾಡಲಾಗಿದೆ.

ಇನ್ನು ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಕಳುವಾಗಿದ್ದ ನೋವಿನಲ್ಲಿ ಒಂದಿಡೀ ವರ್ಷ ಕಳೆದ ಮಗುವಿನ ತಾಯಿ ಕೊನೆಗೂ ಮಗು ಸಿಕ್ಕ ಖುಷಿಯಲ್ಲಿದ್ದಾರೆ. ಮಗುವಿನ ತಾಯಿ ಇಸ್ನಾ ಭಾನು ತಮ್ಮ ಖುಷಿಯನ್ನ ಹಂಚಿಕೊಂಡಿದ್ದು ನಾವು ಒಂದು ವರ್ಷ ಮಗುಗಾಗಿ ಅಲೆದಾಟ ನಡೆದಿದ್ದೇವೆ. ಅದಾದ ಬಳಿಕ ಹೈಕೋರ್ಟ್ ಹೋಗಿದ್ವಿ.. ಮಗು ಸಿಗುತ್ತೆ ಅನ್ನೋ ನಂಬಿಕೆ ಇತ್ತು. ಪೊಲೀಸರು ನಮಗೆ ತುಂಬಾ ಸಹಾಯ ಮಾಡಿದ್ದಾರೆ.. ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

The post ಹುಟ್ಟಿದ 2 ಗಂಟೆಯಲ್ಲೇ ಕಳುವಾಗಿದ್ದ ಮಗು ಕೊನೆಗೂ ಪತ್ತೆ: ನಿಟ್ಟುಸಿರು ಬಿಟ್ಟ ತಾಯಿ appeared first on News First Kannada.

Source: newsfirstlive.com

Source link