ಹುಟ್ಟುಹಬ್ಬದಂದೇ ಟೀಂ ಇಂಡಿಯಾ ಕ್ಯಾಪ್ ಧರಿಸಿದ ಇಶಾನ್ ಕಿಶನ್

ಕೊಲಂಬೋ: ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ಪರ ಮೊದಲ ಏಕದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಸಂಪಾದಿಸುವ ಮೂಲಕ ಇಶಾನ್ ಕಿಶನ್ ತನ್ನ ಹುಟ್ಟುಹಬ್ಬದಂದೇ ಟೀಂ ಇಂಡಿಯಾ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.

ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಿದೆ. ಭಾರತ ತಂಡದ ಪರ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈಗಾಗಲೇ ಭಾರತ ಪರ ಟಿ20 ತಂಡದಲ್ಲಿ ಕಾಣಿಸಿಕೊಂಡು ಉತ್ತಮ ಪ್ರದರ್ಶನ ತೋರಿರುವ ಈ ಇಬ್ಬರು ಆಟಗಾರರು ಏಕದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ತೋರಲಿದ್ದಾರೆ ಎಂಬ ಕೂತುಹಲ ಅಭಿಮಾನಿಗಳಲ್ಲಿ ಮೂಡಿದೆ.

ಸೂರ್ಯಕುಮಾರ್ ಯಾದವ್ ಐಪಿಎಲ್‍ನಲ್ಲಿ 108 ಪಂದ್ಯವಾಡಿ 2,197 ರನ್ ಸಿಡಿಸಿದ್ದಾರೆ. ಇಂದು ನಿರೀಕ್ಷೆಯಂತೆ ಭಾರತ ತಂಡದ ಪರ ವಂಡೇ ಕ್ಯಾಪ್ ತೊಟ್ಟಿದ್ದಾರೆ. ಇದನ್ನೂ ಓದಿ: ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

ಇಂದು 23ನೇ ವರ್ಷಕ್ಕೆ ಕಾಳಿಟ್ಟ ಇಶಾನ್ ಕಿಶನ್ ತಂಡದ ನಾಯಕ ಶಿಖರ್ ಧವನ್ ಅವರಿಂದ ಕ್ಯಾಪ್ ಪಡೆದುಕೊಂಡರು. ಇಶಾನ್ ಐಪಿಎಲ್‍ನಲ್ಲಿ 56 ಪಂದ್ಯದಿಂದ 1,284 ರನ್ ಸಿಡಿಸಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಗೊಂಡಿದ್ದು, 40 ಓವರ್‍ ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸುತ್ತಿದೆ.

The post ಹುಟ್ಟುಹಬ್ಬದಂದೇ ಟೀಂ ಇಂಡಿಯಾ ಕ್ಯಾಪ್ ಧರಿಸಿದ ಇಶಾನ್ ಕಿಶನ್ appeared first on Public TV.

Source: publictv.in

Source link