ಹುಟ್ಟುಹಬ್ಬದ ದಿನದಂದೇ ‘ಮಾಫಿಯಾ’ಗೆ ಕೈಹಾಕಿದ ಡೈನಾಮಿಕ್​ ಪ್ರಿನ್ಸ್​ !

ಹುಟ್ಟುಹಬ್ಬದ ದಿನದಂದೇ ‘ಮಾಫಿಯಾ’ಗೆ ಕೈಹಾಕಿದ ಡೈನಾಮಿಕ್​ ಪ್ರಿನ್ಸ್​ !

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್ ಅವರ 35ನೇ ಚಿತ್ರದ ಫಸ್ಟ್​ ಲುಕ್​ ರೀವಿಲ್​ ಆಗಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ “ಮಾಫಿಯಾ” ಎಂದು ಹೆಸರಿಡಲಾಗಿದೆ.

ಇಂದು ಚಿತ್ರತಂಡ ಪ್ರಜ್ವಲ್​ರಿಂದ ಕೇಕ್ ಕಟ್​ ಮಾಡಿಸಿ ಅವರ ಹುಟ್ಟುಹಬ್ಬವನ್ನ  ಆಚರಿಸಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣ ಹಾಗೂ ಫಸ್ಟ್ ​ಲುಕ್ ರೀವಿಲ್​ ಮಾಡಿದೆ. ಜೊತೆಗೆ ಮೋಷನ್ ಪೋಸ್ಟರ್ ಸಹ ರಿಲೀಸ್ ಮಾಡಿದೆ.

ಚಿತ್ರದಲ್ಲಿ ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಜೊತೆಯಾಗಿದ್ದು, ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ ಎಂಬುದು ಸದ್ಯದ ಮಾಹಿತಿ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಚಿತ್ರ ನಿಮಾಣವಾಗುತ್ತಿದೆ. ಸಿನಿಮಾದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

The post ಹುಟ್ಟುಹಬ್ಬದ ದಿನದಂದೇ ‘ಮಾಫಿಯಾ’ಗೆ ಕೈಹಾಕಿದ ಡೈನಾಮಿಕ್​ ಪ್ರಿನ್ಸ್​ ! appeared first on News First Kannada.

Source: newsfirstlive.com

Source link