ಧಾರವಾಡ: ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಮ್ಮ 44ನೇ ಹುಟ್ಟು ಹಬ್ಬವನ್ನು ನೇತ್ರದಾನಕ್ಕೆ ನೋಂದಾಯಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ನರೇಂದ್ರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಾಯಿ ಅರಣ್ಯ ಕಲ್ಯಾಣ ಮಂಟಪದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಅಮೃತ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ಅವರು ಮರಣಾನಂತರ ನೇತ್ರದಾನ ಮಾಡುವುದಾಗಿ ಸಹಿ ಹಾಕಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡರು.
ಅಲ್ಲದೇ ಅಮೃತ ದೇಸಾಯಿ ಗೆಳೆಯರ ಬಳಗದ ನೂರಾರು ಜನ ಸದಸ್ಯರು ರಕ್ತದಾನ ಮಾಡಿದ್ರು. ಪುನೀತ್ ರಾಜಕುಮಾರ್ ತಮ್ಮ ಸಾವಿನ ನಂತರವೂ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅದೇ ಮಾದರಿಯಲ್ಲಿ ನಾವೂ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಕೆಲಸ ಮಾಡುತ್ತಿದ್ದೇವೆ. ಕೇವಲ ಶಾಸಕರ ಕುಟುಂಬವಷ್ಟೇ ಅಲ್ಲದೇ ಅಮೃತ ದೇಸಾಯಿ ಅವರ ನೂರಾರು ಜನ ಅಭಿಮಾನಿಗಳು ಅವರ ಹುಟ್ಟುಹಬ್ಬದಂದೇ ನೇತ್ರದಾನಕ್ಕೆ ನಿರ್ಧಾರ ಮಾಡಿ ಸಹಿ ಹಾಕಿದ್ದರು.