ಚಿಕ್ಕಮಗಳೂರು: ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಟ ಸಂಚಾರಿ ವಿಜಯ್ ಅವರ ಅಂತಿಮ ದರ್ಶನ ಪಡೆಯಲು ಜನ ನಿರೀಕ್ಷೆಗೂ ಮೀರಿ ಆಗಮಿಸಿದ್ದಾರೆ.

ವಿಜಯ್ ಅವರ ಪಾರ್ಥಿವ ಶರೀರ ಸ್ವಗ್ರಾಮ ಪಂಚನಹಳ್ಳಿಗೆ ಆಗಮಿಸುತ್ತಿದ್ದಂತೆ, ನೂರಾರು ಜನ ಅಂತಿಮ ನಮನ ಸಲ್ಲಿಸಲು ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಆ್ಯಂಬುಲೆನ್ಸ್​ ನಿಲ್ಲಿಸಿ ವಿಜಯ್ ಅವರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸದ್ಯ ಪಾರ್ಥಿವ ಶರೀರವನ್ನ ಅಂತ್ಯಕ್ರಿಯೆ ಮಾಡುವ ಜಾಗಕ್ಕೆ ತೆಗೆದುಕೊಂಡು ಬರಲಾಗಿದೆ.

ವಿಜಯ್ ಅವರ ಅಂತಿಮ ವಿಧಿ-ವಿಧಾನಗಳು ಸ್ನೇಹಿತ ರಘು ಅವರ ತೋಟದಲ್ಲಿ ನೆರವೇರಲಿದೆ. ಸರ್ಕಾರ ಕೇವಲ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಆದರೆ 50ಕ್ಕಿಂತ ಹೆಚ್ಚು ಜನರು ಸೇರಿರೋದ್ರಿಂದ ಕೊರೊನಾ ಆತಂಕ ಎದುರಾಗಿದೆ.

 

The post ಹುಟ್ಟೂರಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನ appeared first on News First Kannada.

Source: newsfirstlive.com

Source link