ನಿನ್ನೆ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ಕೋಟಿ ರಾಮು ಕೊರೊನಾದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ರಾಮು ಅವರ ಪಾರ್ಥೀವ ಶರೀರವನ್ನ ತಮ್ಮ ಹುಟ್ಟೂರಿನತ್ತ ಕೊಂಡೊಯ್ಯಲಾಗ್ತಿದೆ. ಪತ್ನಿ ಮಾಲಾಶ್ರೀ ಹಾಗೂ ಕುಟುಂಬದ ಕೆಲವರು ಮಾತ್ರ ಜೊತೆಯಲ್ಲಿ ತೆರಳುತ್ತಿದ್ದಾರೆ.

ರಾಮು ಹುಟ್ಟೂರು ಕುಣಿಗಲ್ ಬಳಿಯ ಕೊಡಿಗೇನಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಲಾಗಿದೆ. ವಾರದ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಾಮು ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದರು.

The post ಹುಟ್ಟೂರಿನತ್ತ ನಿರ್ಮಾಪಕ ರಾಮು ಪಾರ್ಥೀವ ಶರೀರ appeared first on News First Kannada.

Source: newsfirstlive.com

Source link